ಅಂತರಾಷ್ಟ್ರೀಯ

ಡೋನಾಲ್ಡ್ ಟ್ರಂಪ್ ಬುದ್ಧಿಗೇಡಿ ರಾಜಕಾರಣಿ ಎಂದ ಸನ್ನಿ ಲಿಯೋನ್

Pinterest LinkedIn Tumblr

sunny-leone-donald

ಮುಂಬೈ: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಬ್ಬ ಬುದ್ಧಿಗೇಡಿ ರಾಜಕಾರಣಿಯಾಗಿದ್ದು, ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಎಂದು ಬಾಲಿವುಡ್ ನಟಿ ಹಾಗೂ ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಹೇಳಿದ್ದಾರೆ.

ಮಾಯಾನಗರಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸನ್ನಿ, ಟ್ರಂಪ್ ಅವರ ನಡೆ-ನುಡಿ ಭಿನ್ನವಾಗಿದೆ. ಸದಾ ವಿವಾದ ಪ್ರೀಯರಾದ ಅವರ ಅಭಿಪ್ರಾಯಗಳಿಗೆ ನನ್ನ ಸಮ್ಮತಿಯಿಲ್ಲ. ಯಾವುದೇ ಒಂದು ವಿಷಯದಲ್ಲಿ ಅವರು ಗಟ್ಟಿ ನಿಲುವು ತಾಳದೆ ಇರುವುದರಿಂದ ಅವರ ವಿಷಯದಲ್ಲಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳುವ ಮೂಲಕ ರಾಜಕೀಯವಾಗಿ ಅವರ ವ್ಯಕ್ತಿತ್ವ ವಿಶ್ಲೇಷಿಸಿದ್ದಾರೆ.

ಟ್ರಂಪ್ ವಿಚಾರವಾಗಿ ನೀವು ಪ್ರೀತಿ ಅಥವಾ ದ್ವೇಷವನ್ನು ತಾಳುವ ಮೊದಲು ಅವರ ಭಾಷಣ ತುಣುಕಿನ ವಿಡಿಯೋಗಳನ್ನು ವೀಕ್ಷಿಸಿದರೆ ಉತ್ತಮ ಎಂದು ಹೇಳಿದ್ದಾರೆ ಸನ್ನಿ ಲಿಯೋನ್. 2004ರ ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ‘ನೋ ಮೋರ್ ಬುಷ್ ಗರ್ಲ್ಸ್’ ಅಭಿಯಾನದಲ್ಲಿ ಸನ್ನಿ ಭಾಗವಹಿಸಿ, ಬುಷ್ ವಿರುದ್ಧ ಪ್ರಚಾರ ನಡೆಸಿದ್ದರು.

Comments are closed.