ರಾಷ್ಟ್ರೀಯ

1.8 ಕೋಟಿ ರೂ. ವೆಚ್ಚದಲ್ಲಿ ಜೂನ್ 2ರಂದು ಹೈದರಾಬಾದ್‍ನಲ್ಲಿ ದೇಶದ ಅತೀ ಎತ್ತರದ ತ್ರಿವರ್ಣ ಧ್ವಜ ಹಾರಾಟ !

Pinterest LinkedIn Tumblr

india-flag

ಹೈದರಾಬಾದ್: ತೆಲಂಗಾಣ ರಾಜ್ಯ ನಿರ್ಮಾಣವಾಗಿ 2 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಜೂನ್ 2ರಂದು ಹೈದರಾಬಾದ್‍ನಲ್ಲಿ ದೇಶದ ಅತೀ ಎತ್ತರದ ತ್ರಿವರ್ಣ ಧ್ವಜ ಹಾರಿಸಲು ನಿರ್ಧರಿಸಿದ್ದಾರೆ.

ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಸರ್ಕಾರಕ್ಕೆ ಅನುಮತಿ ಸಿಕ್ಕರೆ ಗುರುವಾರದಂದು ಹೈದರಾಬಾದ್‍ನ ಹುಸೇನ್‍ಸಾಗರ್ ನದಿ ಬಳಿಯಿರುವ ಸಂಜೀವಯ್ಯ ಪಾರ್ಕ್‍ನಲ್ಲಿ 303 ಅಡಿ (92.35 ಮೀಟರ್) ಎತ್ತರದ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಇದಕ್ಕಾಗಿ 1.8 ಕೋಟಿ ರೂ. ವೆಚ್ಚ ಮಾಡಲಾಗ್ತಿದೆ.

ಛತ್ತೀಸ್‍ಗಢದ ರಾಯ್‍ಪುರ್‍ನಲ್ಲಿ ಕಳೆದ ತಿಂಗಳು 82 ಮೀಟರ್ ಎತ್ತರದಲ್ಲಿ ಹಾರಿಸಿದ್ದ ರಾಷ್ಟ್ರಧ್ವಜ ದೇಶದ ಅತೀ ಎತ್ತರದ ರಾಷ್ಟ್ರಧ್ವಜವಾಗಿದೆ. ಇದೀಗ ತೆಲಂಗಾಣದಲ್ಲಿ ಈ ನೂತನ ರಾಷ್ಟ್ರಧ್ವಜ ಹಾರಿಸಲು ಅನುಮತಿ ಸಿಕ್ಕರೆ ಇದೇ ದೇಶದ ಅತೀ ಎತ್ತರದ ರಾಷ್ತ್ರಧ್ವಜವಾಗಲಿದೆ. ಒಂದು ವೇಳೆ ಅನುಮತಿ ಸಿಗಲಿಲ್ಲ ಎಂದರೆ ಧ್ವಜಸ್ತಂಭದ ಎತ್ತರವನ್ನು 275 ಅಡಿಗೆ ಇಳಿಸಲು ನಿರ್ಧರಿಸಲಾಗಿದೆ.

ಇಷ್ಟು ಎತ್ತರದಲ್ಲಿ ಧ್ವಜ ಹಾರಿಸಿದ್ರೆ ಹೈದರಾಬಾದ್ ಸುತ್ತಮುತ್ತ ವಿಮಾನ ಹಾರಟಕ್ಕೆ ತೊಂದರೆಯಾಗುವ ಆತಂಕವಿರುವುದರಿಂದ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಅನುಮತಿ ಅಗತ್ಯವಾಗಿದೆ.

ರಾಷ್ಟ್ರಧ್ವಜವನ್ನು ಮುಂಬೈನಲ್ಲಿ ತಯಾರಿಸಲಾಗಿದ್ದು, 92 ಕೆಜಿ ತೂಕವಿದೆ. ಧ್ವಜಕ್ಕೆ ಹಾನಿಯಾದೀತು ಎಂಬ ಮುನ್ನೆಚ್ಚರಿಕೆಯಿಂದ 4 ಹೆಚ್ಚುವರಿ ಧ್ವಜಗಳನ್ನು ತಯಾರಿಸಲಾಗಿದೆ.

Comments are closed.