ಮನೋರಂಜನೆ

ಅಬ್‍ರಾಮ್ ಹುಟ್ಟುಹಬ್ಬವನ್ನು ವಿಮಾನದಲ್ಲಿ ಆಚರಿಸಿದ ಶಾರೂಖ್ ಖಾನ್ !

Pinterest LinkedIn Tumblr

abram

ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ತಮ್ಮ ಪುತ್ರ ಅಬ್‍ರಾಮ್ ಹುಟ್ಟುಹಬ್ಬವನ್ನು ವಿಮಾನದಲ್ಲಿ ಆಚರಿಸಿದ್ದಾರೆ.

ಹೌದು. ಶಾರೂಖ್ ಖಾನ್ ಅಬ್‍ರಾಮ್‍ನ ಎರಡನೇ ವರ್ಷದ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿದ್ದು, ಬರೋಬ್ಬರಿ 30 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಲದಲಿ ಸೆಲಬ್ರೇಟ್ ಮಾಡಿದ್ದಾರೆ. ಅಲ್ಲದೇ ಶಾರೂಖ್ ಅಬ್‍ರಾಮ್ ಹಾಗೂ ಪುತ್ರಿ ಸುಹಾನ ವಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದಾರೆ.

ABRAM-1

ಲಂಡನ್‍ಗೆ ಕುಟುಂಬ ಸಮೇತ ಪ್ರಯಾಣ ಬೆಳೆಸಿದ್ದ ಶಾರೂಖ್ ಮೊದಲ ಪುತ್ರ ಆರ್ಯನ್ ಶಾಲೆಯ ಫೇರ್‍ವೆಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲದೇ ತಮ್ಮ ಆಪ್ತ ಗೆಳೆಯ ಕರಣ್ ಜೊಹಾರ್ 44ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲೊಂಡಿದ್ದರು. ಇದಾದ ಬಳಿಕ ಮುಂಬೈಗೆ ಆಗಮಿಸಿದ್ದ ಕಿಂಗ್‍ಖಾನ್ ಮಗನ ಬರ್ತ್‍ಡೇ ಅನ್ನು ಬಹಳ ವಿಶೇಷವಾಗಿ ಆಚರಣೆ ಮಾಡಿದ್ದಾರೆ.

ಫ್ಯಾನ್ ಚಿತ್ರದ ನಂತರ ಇದೀಗ ಶಾರೂಖ್ ರಾಹುಲ್ ದೋಲಾಕಿಯಾ ಅವರ ರಯೀಸ್‍ನಲ್ಲಿ ಬ್ಯೂಸಿಯಾಗಿದ್ದು, 2017ರ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

Comments are closed.