ಅಂತರಾಷ್ಟ್ರೀಯ

ಶೌಚಾಲಯದಲ್ಲಿ ಕುಳಿತಿದ್ದ ಯುವಕನ ಜನನಾಂಗವನ್ನೇ ಕಚ್ಚಿದ ಹೆಬ್ಬಾವು ! ಈ ಯುವಕನ ಕಥೆಯನ್ನೊಮ್ಮೆ ಓದಿ….

Pinterest LinkedIn Tumblr

e

ಹಾಂಕಾಂಗ್ : ನೀವು ಶೌಚಾಲಯದಲ್ಲಿ ಕೂರುವ ಮುನ್ನ ಶೌಚಗುಂಡಿಯನ್ನೊಮ್ಮ ಪರೀಕ್ಷಿಸಿ ಕೂರುವ ಅಭ್ಯಾಸವನ್ನು ಮಾಡಿಕೊಳ್ಳುವುದು ಉತ್ತಮ ಏಕೆಂದರೆ ಈ ಹಾಂಕಾಂಗ್ ಯುವಕನ ಕಥೆಯನ್ನೊಮ್ಮೆ ಓದಿ.

ಪಶ್ಚಿಮ ಹಾಂಕಾಂಗ್ ನಲ್ಲಿ ಕಳೆದ ಬುಧವಾರದಂದು ಬೆಳಗ್ಗೆದ್ದು ಶೌಚಗೃಹಕ್ಕೆ ತೆರಳಿ ನಿತ್ಯಕರ್ಮಕ್ಕೆ ಕುಳಿತಿದ್ದ ವ್ಯಕ್ತಿಯೊಬ್ಬನ ಜನನಾಂಗವನ್ನೇ ಹೆಬ್ಬಾವೊಂದು ಕಚ್ಚಿದ ವಿಲಕ್ಷಣ ಘಟನೆ ನಡೆದಿದೆ.

snake1

w

ಬೋನ್ ಮಕ್ ಚುವಾಯ್ ಎಂಬ ಯುವಕ ಎಂದಿನಂತೆ ತನ್ನ ನಿತ್ಯಕರ್ಮಕ್ಕೆ ಟಾಯ್ಲೆಟ್ ನಲ್ಲಿ ಕುಳಿತಿರುವ ವೇಳೆ ಸಿನಿಮೀಯ ರೀತಿಯಲ್ಲಿ ಸುಮಾರು ಮೂರು ಮೀಟರ್ ಉದ್ದದ ಹೆಬ್ಬಾವು ಆತನ ಜನನಾಂಗಕ್ಕೆ ದಾಳಿ ನಡೆಸಿದೆ. ಬಳಿಕ ಹೆಂಡತಿ ಮತ್ತು ನೆರೆಹೊರೆಯವರ ಸಹಾಯದಿಂದ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯಲ್ಲಿ ಆತನ ಜನನಾಂಗದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ, ಆದರೂ ಆತನ ಪ್ರಾಣಕ್ಕೇನೂ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬೋನ್ ಮಕ್ ಚುವಾಯ್, ಹೆಬ್ಬಾವು ಮನೆಯ ಶೌಚಗುಂಡಿಯ ಕೊಳವೆ ಮೂಲಕ ಬಂದಿದ್ದು, ಕಚ್ಚಿದ ಸುಮಾರು ಅರ್ಧಘಂಟೆಗೂ ಅಧಿಕ ಕಾಲ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯವರು ಆಗಮಿಸಿ ಹಾವನ್ನು ಸೆರೆಹಿಡಿದ್ದಾರೆ.

Comments are closed.