ಮನೋರಂಜನೆ

ಹೊಸ ಚಿತ್ರ ಉಪೇಂದ್ರ ಮತ್ತೆ ಹುಟ್ಟಿಬಾ?

Pinterest LinkedIn Tumblr

uppiಉಪೇಂದ್ರ ಈಗಷ್ಟೇ “ಕಲ್ಪನಾ -2′ ಮುಗಿಸಿದ್ದಾರೆ. ಜೊತೆಗೆ ಹಿಂದಿಯ “ಓ ಮೈ ಗಾಡ್‌’ ರಿಮೇಕ್‌ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆಯೇ ಉಪೇಂದ್ರ ಅವರ ಹೊಸ ಚಿತ್ರವೊಂದು ಅನೌನ್ಸ್‌ ಆಗಿದೆ. ಆ ಚಿತ್ರದ ಟೈಟಲ್‌ ತುಂಬಾ ಭಿನ್ನವಾಗಿದೆ ಕೂಡಾ. ಅದು “ಉಪೇಂದ್ರ ಮತ್ತೆ ಹುಟ್ಟಿ ಬಾ – ಇಂತಿ ಪ್ರೇಮಾ’. ಹೌದು, ಹೀಗೊಂದು ಟೈಟಲ್‌ನೊಂದಿಗೆ ಮುಂದಿನ ತಿಂಗಳಿನಿಂದ ಉಪೇಂದ್ರ ಅವರ ಸಿನಿಮಾ ಶುರುವಾಗುತ್ತಿದೆ.

ಈ ಚಿತ್ರವನ್ನು ಲೋಕನಾಥ್‌ (ಲೋಕಿ) ನಿರ್ದೇಶಿಸುತ್ತಿದ್ದಾರೆ. “ಉಪೇಂದ್ರ ಮತ್ತೆ ಹುಟ್ಟಿ ಬಾ’ ಅಂದರೆ ಏನು ಎಂಬ ಕುತೂಹಲ ಅನೇಕರಿಗಿದೆ. ಅವರ ಈ ಹಿಂದಿನ “ಉಪೇಂದ್ರ’ ಚಿತ್ರದ ಕುರಿತಾಗಿ ಇಲ್ಲಿ ಹೇಳಲಾಗುತ್ತಾ ಅಥವಾ ಇನ್ಯಾವುದೋ ಅಂಶಗಳನ್ನು ಇಲ್ಲಿ ನಿರ್ದೇಶಕರು ಹೇಳುತ್ತಾರಾ ಎಂದರೆ ಅದಕ್ಕೆ ಈಗಲೇ ಉತ್ತರವಿಲ್ಲ.

ನಿರ್ದೇಶಕ ಲೋಕನಾಥ್‌ ಹೇಳುವ ಪ್ರಕಾರ, “ಚಿತ್ರಕ್ಕೊಂದು ಭಿನ್ನವಾದ ಟೈಟಲ್‌ ಬೇಕಿತ್ತು. ಆಗ ಈ ಟೈಟಲ್‌ ಚೆನ್ನಾಗಿರುತ್ತೆ ಎನಿಸಿ ಇಟ್ಟೆವು. ಉಪ್ಪಿ ಅವರ ಉಪೇಂದ್ರ ಚಿತ್ರದ ಶೇಡ್‌ನ‌ ಜೊತೆಗೆ ಸಾಕಷ್ಟು ಅಂಶಗಳನ್ನು ಇಲ್ಲಿ ಹೇಳುತ್ತಿದ್ದೇನೆ. ಸದ್ಯಕ್ಕೆ ಪೂರ್ವತಯಾರಿ ನಡೆಯುತ್ತಿದ್ದು, ಮುಂದಿ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ’ ಎಂದಷ್ಟೇ ಹೇಳುತ್ತಾರೆ ಲೋಕನಾಥ್‌. ಸದ್ಯ ನಾಯಕಿ ಸೇರಿದಂತೆ ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.
-ಉದಯವಾಣಿ

Comments are closed.