
ಪಶ್ಚಿಮ ಬಂಗಾಳ: ಮಹಾಭಾರತದ ದ್ರೌಪದಿ ಖ್ಯಾತಿಯ ರೂಪಾಗಂಗೂಲಿ ವಿರುದ್ಧ ಕ್ರಿಕೆಟಿಗ ಲಕ್ಷ್ಮೀರತನ್ ಶುಕ್ಲಾ ಭಾರೀ ಗೆಲುವು ಸಾಧಿಸಿದ್ದಾರೆ. ಔರಾ ಉತ್ತರ್ ವಿಧಾನಸಭಾ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದ ಖ್ಯಾತ ನಟ ರೂಪಾ ಗಂಗೂಲಿ ಅವರ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಶುಕ್ಲಾ ಅವರು ಆರಂಭದ ಸುತ್ತಿನಿಂದ ಮುನ್ನಡೆ ಸಾಧಿಸಿದ್ದು ಅಂತಿಮವಾಗಿ ವಿಜಯಮಾಲೆಯನ್ನು ಧರಿಸಿದ್ದಾರೆ.
ಶುಕ್ಲಾ 3 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 1 ವಿಕೆಟ್ ಅನ್ನು ಗಳಿಸಿರುವುದೇ ಅಲ್ಲದೆ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿಡೇರ್ ಡೆವಿಲ್ಸ್ , ಸನ್‌ರೈಸರ್ಸ್ ಹೈದ್ರಾಬಾದ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.
ಶ್ರೀಶಾಂತ್‌ಗೆ ಮುಖಭಂಗ:
ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಿಂದ ಕಂಗೆಟ್ಟಿದ್ದ ಶ್ರೀಶಾಂತ್ ಕೇರಳದ ತಿರುವನಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ವಿ.ಎಸ್.ಶಿವಕುಮಾರ್ ವಿರುದ್ಧ ಭಾರೀ ಅಂತರಗಳಿಂದ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.
ಭುಟಿಯಾಗೆ ಒಲಿಯದ ಗೆಲುವು:
ಖ್ಯಾತ ಫುಟ್ಬಾಲ್ ಆಟಗಾರ ಬೆಚ್ಚಿಂಗ್ ಭುಟಿಯಾ ಅವರು ಟಿಎಂಸಿ ಅಭ್ಯರ್ಥಿಯಾಗಿ ಸಿಲಿಗುರಿ ಕ್ಷೇತ್ರದಿಂದ ಸ್ಪರ್ಧಿಸಿ ಸಿಪಿಎಂ ಅಭ್ಯರ್ಥಿ ಅಶೋಕ್ ಭಟ್ಟಾಚಾರ್ಯ ವಿರುದ್ಧ ಸೋಲುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ತಮಿಳುನಾಡು ವರದಿ: ಸಾರಥಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲೂ ಛಾಪು ಮೂಡಿಸಿದ್ದ ಖ್ಯಾತನಟ ಶರತ್‌ಕುಮಾರ್ ಅವರು ತೆರುಚೆಂಡೂರ್ ವಿಧಾನಸಭಾ ಕ್ಷೇತ್ರದಿಂದ ತಿರುಚೆಂಡೂರ್ ಸ್ಪರ್ಧಿಸಿದ್ದು ಹಿನ್ನೆಡೆ ಅನುಭವಿಸಿದ್ದಾರೆ.
ಉಲುಂದುರ್ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿಎಂಡಿಕೆ ಪಕ್ಷದ ನಾಯಕ , ಖ್ಯಾತ ಚಿತ್ರನಟ ಕ್ಯಾಪ್ಟನ್ ವಿಜಯ್‌ಕಾಂತ್ ಅವರು ಎಡಿಎಂಕೆ ಅಭ್ಯರ್ಥಿ ಕುಮಾರಗುರು ಎದುರು ಸೋಲು ಮೂಲಕ ಮುಖಭಂಗ ಅನುಭವಿಸಿದ್ದಾರೆ.
Comments are closed.