ಕರ್ನಾಟಕ

ಬೆಂಗಳೂರಿಗರಲ್ಲಿ ಹೆಚ್ಚುತ್ತಿರುವ ಅಧಿಕ ರಕ್ತದೊತ್ತಡ

Pinterest LinkedIn Tumblr

bp

ಬೆಂಗಳೂರು: ವಿಶ್ವ ಅಧಿಕ ರಕ್ತದೊತ್ತಡ ದಿನದಂದು ಇಂಡಸ್ ಹೆಲ್ತ್ ಪ್ಲಸ್ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ 25-35 ವರ್ಷ ವಯೋಮಾನದ ಒಟ್ಟು ಜನಸಂಖ್ಯೆಯ ಪೈಕಿ ಶೇ.15ರಷ್ಟು ಜನರು ಅಧಿಕ ರಕ್ತದೊತ್ತಡದ ಅಪಾಯ ಎದುರಿಸುವ ಸಂಭವವಿದೆ. ಒತ್ತಡದ ಜೀವನ ಶೈಲಿ ಹಾಗೂ ರಕ್ತದೊತ್ತಡದಂತಹ ಅನಾರೋಗ್ಯದ ಸಮಸ್ಯೆ ಕಡೆ ನಿರ್ಲಕ್ಷ್ಯವೇ ಇದಕ್ಕೆ ಪ್ರಮುಖ ಕಾರಣ. ಈ ವರದಿ 2015ರ ಜನವರಿಯಿಂದ 2016ರ ಏಪ್ರಿಲ್ ನಡುವೆ ತಡೆಗಟ್ಟುವ ಆರೋಗ್ಯ ತಪಾಸಣೆಗೆ ಒಳಗಾದ ನಗರದ ಒಟ್ಟು 13,852 ಜನರ ಅಧ್ಯಯನ ಆಧರಿಸಿದೆ.

ಇಂಡಸ್ ಹೆಲ್ತ್ ಪ್ಲಸ್‌ನ ಅಬ್ನಾರ್ಮಾಲಿಟಿ ವರದಿಯ ಪ್ರಕಾರ ಬೊಜ್ಜುತನ, ಮಧುಮೇಹ ಹಾಗೂ ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವ ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಉದ್ಯೋಗ ಮಾಡುತ್ತಿರುವವರ ಪೈಕಿ ಶೇ.5ರಷ್ಟು ಜನರಲ್ಲಿ ಒತ್ತಡದಿಂದಾಗಿ ಅಧಿಕ ರಕ್ತದೊತ್ತಡ ಉಂಟಾಗುವ ಸಂಭವವಿದೆ. ಅದರಲ್ಲೂ ಬೆಂಗಳೂರಿನಲ್ಲಿರುವ ಐಟಿ ಉದ್ಯೋಗಿಗಳಲ್ಲಿ ಈ ಸಮಸ್ಯೆ ಎದುರಾಗುವ ಸಂಭವ ಬಹಳ ಹೆಚ್ಚು. ಕೇವಲ ವಯಸ್ಸಾದವರಷ್ಟೇ ಅಲ್ಲದೆ ಈ ಸಮಸ್ಯೆ 20ರ ಹರೆಯದಲ್ಲಿರುವ ಯುವತಿಯರಲ್ಲಿಯೂ ಕಂಡು ಬಂದಿದೆ. ಹೆಚ್ಚು ಕಡಿಮೆ ಯಾವುದೇ ರೀತಿಯ ದೈಹಿಕ ಚಟುವಟಿಕೆಯಿಲ್ಲದಿರುವಂತಹ ಜೀವನಶೈಲಿಯಿರುವಂತಹವರು ಅಧಿಕ ರಕ್ತದೊತ್ತಡದ ಸಮಸ್ಯೆಗೆ ಈಡಾಗುವ ಸಂಭವವಿದೆ.

ತಪಾಸಣೆಗಾಗಿ ಬಂದ ಐಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳ ಪೈಕಿ, ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಅಧಿಕ ರಕ್ತದೊತ್ತಡದ ತೊಂದರೆಯಿಂದ ಬಳಲುತ್ತಿದ್ದರು ಅಥವಾ ಶೀಘ್ರದಲ್ಲಿಯೇ ಸಮಸ್ಯೆ ಎದುರಾಗುವ ಸಂಭವ ಎದುರಿಸುತ್ತಿರುವುದು ಕಂಡು ಬಂತು. ಐಟಿ/ಬಿಪಿಒ ವೃತ್ತಿಪರರ ಪೈಕಿ ಶೇ.31ರಷ್ಟು ಉದ್ಯೋಗಿಗಳು ಅಧಿಕ ರಕ್ತದೊತ್ತಡ ಹೊಂದಿದ್ದು, 5ರಷ್ಟು ಜನರಲ್ಲಿ ಮಾರಕ ಮಟ್ಟವನ್ನು ತಲುಪಿರುವುದು ಆತಂಕಕಾರಿ ವಿಷಯವಾಗಿದೆ.

20-25 ವರ್ಷ ವಯೋಮಾನದ ಯುವಜನರ ಪೈಕಿ ಶೇ.18ರಷ್ಟು ಜನರು ಹಾಗೂ 26-30 ವರ್ಷ ವಯಸ್ಸಿನ ಶೇ.23ರಷ್ಟು ಯುವ ಗುಂಪುಗಳಲ್ಲಿ 1ನೆ ಹಂತದ ಅಧಿಕ ರಕ್ತದೊತ್ತಡ ಪತ್ತೆ ಹಚ್ಚಲಾಯಿತು. ಈ ವರ್ಗದ ಗುಂಪಿನವರ ಪೈಕಿ 2ನೆ ಹಂತದ ಅಧಿಕ ರಕ್ತದೊತ್ತಡದ ಪ್ರಮಾಣ ಕ್ರಮವಾಗಿ ಶೇ.5-3ರಷ್ಟಿದೆ.

Comments are closed.