
ನವದೆಹಲಿ: ವಿಶ್ವದ ಅತೀ ದೊಡ್ದ ಸರಕು ವಿಮಾನ ಅಂಟೊನೊವ್ ಎ ಎನ್ -225 ಶುಕ್ರವಾರ ಮುಂಜಾನೆ ತುರ್ಕ್ವೆುನಿಸ್ಥಾನ್ನಿಂದ ಹೈದರಾಬಾದ್ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದೆ.
ಹಲವು ವಿಶೇಷತೆ ಹೊಂದಿರುವ ಈ ವಿಮಾನ ಬೃಹದಾಕಾರದ ಮೇಲ್ಮೈ ಹೊಂದಿದೆ. ಇದಕ್ಕೆ ಆರು ಟಬೋ ಫ್ಯಾನ್ಗಳನ್ನು ಅಳವಡಿಸಲಾಗಿದ್ದು, ವಿಮಾನ ಬರೋಬ್ಬರಿ 640 ಟನ್ ಭಾರವಿದೆ. ಸುಲಭವಾದ ಕಾರ್ಯಾಚರಣೆಗಾಗಿ ಅಗಲವಾದ ಪಂಕಗಳನ್ನು ಅಳವಡಿಸಿದೆ. 180ರಿಂದ 200 ಟನ್ವರೆಗೆ ಭಾರವನ್ನು ಹೊತ್ತೊಯ್ಯಬಹುದಾದ ಸಾಮರ್ಥ್ಯ ಹೊಂದಿದೆ.
ಭಾರತದಲ್ಲಿ ರಕ್ಷಣಾ ಚಟುವಟಿಕೆ ಸಂಬಂಧಿಸಿದ ಉಪಕರಣಗಳನ್ನು ಸಿದ್ಧಪಡಿಸಲು ಅಗತ್ಯವಾದ ಸಾಮಗ್ರಿಗಳಿಗಾಗಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಪೆನ್ಸ್ ವಿಭಾಗ ಉಕ್ರೇನ್ನ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಹಿನ್ನೆಲೆೆಯಲ್ಲಿ ಅತೀ ದೊಡ್ಡ ಸರಕು ವಿಮಾನ ಭಾರತದಲ್ಲಿ ನೆಲೆಯೂರಿದೆ. ರಕ್ಷಣಾ ಇಲಾಖೆ ಬಲಪಡಿಸಲು ಸರ್ಕಾರ 200 ಮಧ್ಯಮ ಟಬೋಫ್ಯಾನ್ ಖರೀದಿಸಲು ಚಿಂತಿಸಿದ್ದು, ಇದಕ್ಕಾಗಿ 35,000 ಕೋಟಿ ಹಣವನ್ನು ಮೀಸಲಿಟ್ಟಿದೆ.