ಮನೋರಂಜನೆ

ಕಲ್ಪನಾ-2 ಚಿತ್ರೀಕರಣದಲ್ಲಿ ತೊಡೆ ತಟ್ಟಿ ಕಬಡ್ಡಿ ಆಡಿದ ರಿಯಲ್‌ ಸ್ಟಾರ್

Pinterest LinkedIn Tumblr

kalಮಲ್ಲೇಶ್ವರ ಮೈದಾನದಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಆ ಮೈದಾನ ಒಳಹೊಕ್ಕವರೆಲ್ಲರಿಗೂ ಅದೊಂದು ಅಂತಾರಾಜ್ಯ ಕಬಡ್ಡಿ ಪಂದ್ಯಾವಳಿಯೇ ಇರಬೇಕು ಎಂಬ ಸಣ್ಣ ಗೊಂದಲ. ಆ ಗೊಂದಲದಲ್ಲೇ ಒಳಬಂದು ಇಣುಕಿ ನೋಡಿದವರಿಗಷ್ಟೇ ಅದೊಂದು ಸಿನಿಮಾ ಶೂಟಿಂಗ್‌ ಅನ್ನೋದು ಗೊತ್ತಾಗುತ್ತಿತ್ತು. ಅಷ್ಟಕ್ಕೂ ಅಲ್ಲಿ ನಡೆಯುತ್ತಿದ್ದದ್ದು. ಉಪೇಂದ್ರ ಅಭಿನಯದ “ಕಲ್ಪನಾ-2′ ಚಿತ್ರದ ಹಾಡಿನ ಚಿತ್ರೀಕರಣ. ಹೌದು, ಕಳೆದ ಎರಡೂ¾ರು ದಿನಗಳಿಂದ ಆ ಮೈದಾದಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ.

ಅದು ಹಾಡಿನ ಸನ್ನಿವೇಶದಲ್ಲಿ ಬರುವ ಕಬಡ್ಡಿ ಪಂದ್ಯಾವಳಿ. ನೃತ್ಯ ನಿರ್ದೇಶಕ ಕಲೈ ಮೈಕ್‌ ಹಿಡಿದು, ಅತ್ತಿಂದಿತ್ತ ಓಡಾಡಿಕೊಂಡು ಸ್ಟೆಪ್‌ ಹೇಳಿಕೊಡುತ್ತಿದ್ದರು. ಅದರೊಂದಿಗೇ, ಕಬಡ್ಡಿ ಆಟದ ಸನ್ನಿವೇಶವನ್ನೂ ಚಿತ್ರಿಸಿಕೊಳ್ಳುತ್ತಿದ್ದರು. ಒಂದು ಕರ್ನಾಟಕ ತಂಡ, ಇನ್ನೊಂದು ಬಿಹಾರ ತಂಡ. ಈ ಎರಡರ ಮಧ್ಯೆ ನಡೆಯುವ ಕಬಡ್ಡಿ ಪಂದ್ಯಾವಳಿ ಆ ಹಾಡಿನ ಹೈಲೈಟ್‌. ಉಪೇಂದ್ರ ಅವರು ತಮ್ಮ ಎಡಗಾಲಿಗೆ ಸಣ್ಣ ಪೆಟ್ಟು ಮಾಡಿಕೊಂಡಿದ್ದರು.ಆದರೂ, ಕ್ಯಾಮೆರಾ ಮುಂದೆ ನಿಂತುಕೊಂಡೇ, ತಮ್ಮ ತೊಡೆ ತಟ್ಟಿ “ಕಬಡ್ಡಿ ಕಬಡ್ಡಿ ಕಬಡ್ಡಿ …’ ಅಂತ ಎದುರಾಳಿ ತಂಡದೊಂದಿಗೆ ಸೆಣೆಸಾಟ ನಡೆಸಿದ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಚಿತ್ರಿಸಿಕೊಂಡರು ಎಂ.ಆರ್‌. ಸೀನು. ಪಕ್ಕದಲ್ಲೇ ನಿಂತುಕೊಂಡು ಮಾನಿಟರ್‌ ನೋಡುತ್ತಿದ್ದ ನಿರ್ದೇಶಕ ಅನಂತ್‌ ರಾಜು, ಆ ದೃಶ್ಯಗಳೆಲ್ಲವೂ ಸರಿಯಾಗಿ ಬಂದಿವೆಯೇ ಅಂತ ವೀಕ್ಷಿಸುತ್ತಿದ್ದರು.

ಅದೊಂದು ಕನ್ನಡಪರ ಹಾಡು. ಹಾಗಾಗಿ, ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಕನ್ನಡದ ಬಾವುಟಗಳನ್ನು ಹಿಡಿದು, ಹೆಜ್ಜೆ ಹಾಕುತ್ತಿದ್ದರು. ಕನ್ನಡ ಸಂಸ್ಕೃತಿ ಬಿಂಬಿಸುವ ಪರಿಕರಗಳೇ ಕಾಣಿಸಿದ್ದು ವಿಶೇಷವಾಗಿತ್ತು. “ಕಲ್ಪನಾ’ ಚಿತ್ರದಲ್ಲಿ ಕ್ರಿಕೆಟ್‌ ಆಟವನ್ನು ತೋರಿಸಲಾಗಿತ್ತು. “ಕಲ್ಪನಾ-2′ ಚಿತ್ರದಲ್ಲಿ “ಕಬಡ್ಡಿ’ ಆಟವನ್ನು ಪ್ರದರ್ಶಿಸಲಾಗುತ್ತಿದೆ. ಚಿತ್ರದ ಇನ್ನೊಂದು ಹಾಡನ್ನು ಚಿತ್ರಿಕರಿಸಿದರೆ, ಕುಂಬಳಕಾಯಿ ಎಂಬುದು ಚಿತ್ರತಂಡದ ಹೇಳಿಕೆ.
-ಉದಯವಾಣಿ

Write A Comment