ರಾಷ್ಟ್ರೀಯ

‘ಉತ್ತರಾಖಂಡ್ ಲಂಚಾವತಾರದ ವಿಡಿಯೋ ಬಹಿರಂಗ’

Pinterest LinkedIn Tumblr

harish-rawat-e1461149557734ಡೆಹ್ರಾಡೂನ್: ಉತ್ತರಾಖಂಡ್ ನಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ವಾಕ್ಸಮರ ಮುಂದುವರೆದಿದೆ.

ಕಾಂಗ್ರೆಸ್ ಶಾಸಕ ಮದನ್ ಬಿಶ್ತ್ ಅವರು ಬಂಡಾಯ ಶಾಸಕ ಹರಕ್ ಸಿಂಗ್ ರಾವತ್ ಅವರ ಬಳಿ 12 ಮಂದಿ ಕಾಂಗ್ರೆಸ್ ಶಾಸಕರಿಗೆ ಲಕ್ಷಾಂತರ ರೂಪಾಯಿಗಳನ್ನು ನೀಡಿರುವುದರ ಹಿಂದಿನ ಸೂತ್ರಧಾರಿ ತಾನೇ ಎಂದು ಹೇಳಿಕೊಂಡಿದ್ದು ವಿಡಿಯೋದಲ್ಲಿ ಇದೆ. ಉಪಸಭಾಧ್ಯಕ್ಷ ಎಪಿ. ಮೈಖುರಿ ಸೇರಿದಂತೆ 12 ಕಾಂಗ್ರೆಸ್ ಶಾಸಕರಿಗೆ ಪದಚ್ಯುತ ಮುಖ್ಯಮಂತ್ರಿಯ ಪರವಾಗಿ ಲಕ್ಷಾಂತರ ರೂಪಾಯಿ ಒದಗಿಸಲಾಗಿತ್ತು ಎಂದು ಅವರು ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿದೆ.

ರಾವತ್ ಅವರು 25 ಲಕ್ಷ ರೂಪಾಯಿಗಳನ್ನು ಕೆಲವು ಶಾಸಕರುಗಳಿಗೆ 50 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಬಿಶ್ತ್ ಹೇಳಿದ್ದು ಕೂಡಾ ವಿಡಿಯೋದಲ್ಲಿ ದಾಖಲಾಗಿದೆ. ‘ನಾನು ವೇತನ ಪಡೆದುಕೊಳ್ಳುವುದಿಲ್ಲ, ಆದರೆ ತಿಂಗಳಿಗೆ 5ರಿಂದ 10 ಲಕ್ಷ ರೂಪಾಯಿಗಳನ್ನು ಬಯಸಿದಾಗೆಲ್ಲಾ ಮುಖ್ಯಮಂತ್ರಿಯಿಂದ ಪಡೆದುಕೊಳ್ಳುತ್ತೇನೆ’ ಎಂದೂ ಶಾಸಕ ಪ್ರತಿಪಾದಿಸಿದ್ದಾರೆ.

Write A Comment