ಸಕಲೇಶಪುರ: ಶಿರಾಡಿಘಾಟ್‌ನಲ್ಲಿ ದರೋಡೆ ಪ್ರಕರಣ ಮತ್ತೆ ಮರುಕಳಿಸಿದ್ದು, ಕಾರು ಹಾಗೂ ಎರಡು ಲಾರಿಗಳನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರದಪುಡಿ ಎರಚಿ ನಗದು, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿನ ಶಿರಾಡಿಘಾಟ್ ಹೆಗ್ಗದ್ದೆೆ ಚರ್ಚ್ ಸಮೀಪ ಸಣ್ಣ ಅಪಘಾತ ನಡೆದದ್ದರಿಂದ ಅದೇ ಮಾರ್ಗವಾಗಿ ಹೊರಟಿದ್ದ ಮೂರು ಜನರಿದ್ದ ರಿಡ್ಜ್ ಕಾರು ಅಲ್ಲಿಯೇ ನಿಂತಿತ್ತು. ಆಗ ಇದೇ ವೇಳೆಗೆ ಓಮಿನಿ ಕಾರಿನಲ್ಲಿ ಬಂದಿದ್ದ ಮೂವರ ತಂಡ ಏಕಾಏಕಿ ದಾಳಿ ನಡೆಸಿ, ಕಾರಿನ ಗಾಜು ಒಡೆದು, ಕಾರಿನಲ್ಲಿದ್ದ ಮೂವರಿಗೆ ಕಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆೆ ನಡೆಸಿ, ನಾಲ್ಕು ಸಾವಿರ ರು. ನಗದು ಹಾಗೂ ಮೊಬೈಲ್ ಕಸಿದು ಓಡಿ ಹೋದರು.
ಇದೆ ತಂಡ ನಿಂತಿದ್ದ ಎರಡು ಮರಳು ಲಾರಿಗಳ ಚಾಲಕರಿಗೂ ಸಹ ಕಾರದಪುಡಿ ಎರಚಿ ಒಬ್ಬನಿಂದ ಹತ್ತು ಸಾವಿರ ನಗದು, ಮತ್ತೊೊಬ್ಬನಿಂದ ಎರಡು ಸಾವಿರ ನಗದು ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಕಾರಿನಲ್ಲಿದ್ದ ಮದನ್, ಸಂಪತ್, ಅರುಣ್ ಕುಮಾರ್ ಅವರು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆೆಯಲ್ಲಿ ಚಿಕಿತ್ಸೆೆ ಪಡೆದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ಕುರಿತು ಗ್ರಾಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.