ಕುಂದಾಪುರ: ಕುಂದಾಪುರ ತಾಲೂಕುಪಂಚಾಯತಿಗೆ ನೂತನ ಸಾರಥಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಜಯಶ್ರೀ ಸುಧಾಕರ ಮೊಗವೀರ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣ ಕುಮಾರ್ ಶೆಟ್ಟಿ ಕಡ್ಕೆ ಅವಿರೋಧವಾಗಿ ಆಯ್ಕೆಯಾದರು.


ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯ ಮುಖ್ಯಸ್ಥಿಕೆಯನ್ನು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಅವರು ವಹಿಸಿದ್ದರು.

ಅಧ್ಯಕ್ಷೆ ಜಯಶ್ರೀ ಸ್ನಾತಕೋತ್ತರ ಪದವಿಧರೆ:
ವಿದ್ಯಾರ್ಹತೆ: ಎಂ.ಎಸ್.ಡಬ್ಲ್ಯೂ. ಹಾಗೂ ಎಂ.ಬಿ.ಎ. ಸ್ನಾತಕೋತ್ತರ ಪದವಿಧರೆ
ಪ್ರತಿನಿಧಿಸುತ್ತಿರುವ ಕ್ಷೇತ್ರ: ಮೊಳಹಳ್ಳಿ ತಾಲೂಕು ಪಂಚಾಯತ್
ಇತರ ಸಾಮಾಜಿಕ ಚಟುವಟಿಕೆಗಳು:
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾಜಿ ಕಾರ್ಯದರ್ಶಿ
ಹಾಲಾಡಿ ಶಂಕರನಾರಾಯಣ ಘಟಕದ ಮೊಗವೀರ ಮಹಿಳಾ ಸಂಘಟನೆಯ ಸಕ್ರೀಯ ಕಾರ್ಯಕರ್ತೆ
ಏಡ್ಸ್ ಜನಜಾಗೃತಿ ಜಾಥಾ, ರಕ್ತದಾನ ಶಿಬಿರ, ಮಹಿಳಾ ಸಬಲೀಕರಣ ಮತ್ತು ಕಾನೂನು ಅರಿವು ಕಾರ್ಯಕ್ರಮ, ನೇತ್ರ ತಪಾಸಣಾ ಶಿಬಿರ, ದಾನಿಗಳಿಂದ ಬಡವರಿಗೆ ಕನ್ನಡಕ ವಿತರಣೆ, ಮಳೆ ನೀರು ಕೊಯ್ಲು, ಜಲ ಮರುಪೂರಣ ಕಾರ್ಯಕ್ರಮ ಹೀಗೆ ಸಮಾಜ ಮುಖಿ ಚಟುವಟಿಕೆಯಲ್ಲಿ ಪಾಲ್ಗೊಂಡು ಬಿಜೆಪಿಯಲ್ಲಿ ಸಕ್ರೀಯರಾಗಿದ್ದು ಸಾಮಾಜಿಕ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದವರು.

ಬಿಜೆಪಿಯ ಸಕ್ರೀಯ ಕಾರ್ಯಕರ್ತ ಪ್ರವೀಣ ಕುಮಾರ್ ಶೆಟ್ಟಿ ಕಡ್ಕೆ:
ಪ್ರತಿನಿಧಿಸುತ್ತಿರುವ ಕ್ಷೇತ್ರ: ನಾಡಾ ತಾಲೂಕು ಪಂಚಾಯತ್
ನಾಡಾ ಗ್ರಾಮ ಪಂಚಾಯತ್ ಗೆ ಮೂರು ಬಾರಿ ಸದಸ್ಯರಾಗಿ ಆಯ್ಕೆ, ಒಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆ
ನಾಡಾ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕನಾಗಿ ಮತ್ತು ಪಡುಕೋಣೆ ಸಹಕಾರಿ ಸಂಘಕ್ಕೆ ಎರಡು ಬಾರಿ ನಿರ್ದೇಶಜನಾಗಿ ಆಯ್ಕೆಯಾಗಿದ್ದು ಒಂದು ಅವಧಿಗೆ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಕೆ
ಕಳೆದ 20 ವರ್ಷದಿಂದ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದು ಯುವಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಹುದ್ದೆಯನ್ನು ಅಲಂಕರಿಸಿದವರು.