ಪಿಯೋಂಗ್ಯಾಂಗ್ (ಉ.ಕೊರಿಯ), ಮೇ 3- ಉತ್ತರ ಕೊರಿಯದಲ್ಲಿ ಇನ್ನು ಒಂದು ವಾರ ಕಾಲ ಯಾವುದೇ ವಿವಾಹ ಅಥವಾ ಮೃತರ ಅಂತ್ಯ ಸಂಸ್ಕಾರ ಪ್ರಕ್ರಿಯೆಗಳನ್ನು ನಡೆಸುವಂತಿಲ್ಲ..! ಇಂತಹ ಜನವಿರೋಧಿ ಮತ್ತು ವಿವಾದಾತ್ಮಕ ಆದೇಶಗಳಿಂದ ಕುಖ್ಯಾತನಾಗಿರುವ ಆ ದೇಶದ ಸರ್ವಾಧಿಕಾರಿ ಕಿಮ್ಜಾಂಗ್ ಉನ್ ಎಂಬ ಸರ್ವಾಧಿಕಾರಿ ವಿಧಿಸಿರುವ ಕಟ್ಟಾಜ್ಞೆ… ಮುಂದಿನ ವಾರ ನಡೆಯಲಿರುವ ಸರ್ವಾಧಿಕಾರಿ ಕಿಮ್ಜಾಂಗ್ ಉನ್ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಕಿಮ್ ಇಂತಹ ಅಪರೂಪದ ಆದೇಶ ಹೊರಡಿಸಿದ್ದಾರೆ. ಇಷ್ಟೇ ಅಲ್ಲ… ತನ್ನ ಬಗ್ಗೆ ಬದ್ಧತೆ ಪ್ರದರ್ಶಿಸಲು ಪ್ರಜೆಗಳು 70 ದಿನಗಳ ಕಾಲ ಹೆಚ್ಚುವರಿ ಕೆಲಸ ಮಾಡಬೇಕು ಎಂದೂ ಅಪ್ಪಣೆ ಮಾಡಿದ್ದಾನೆ.
ಪಟ್ಟಾಭಿಷೇಕದ ಸಿದ್ಧತೆ ಜೋರಾಗಿದ್ದು, ಈ ಅವಧಿಯಲ್ಲಿ ಹೊರಗಿನವರು ರಾಜಧಾನಿ ಪ್ರವೇಶಿಸುವಂತಿಲ್ಲ. ರಾಜಧಾನಿ ಜನ ಹೊರಹೋಗುವಂತಿಲ್ಲ. ರಾಜಧಾನಿಯಾದ್ಯಂತ ಸೇನಾಪಡೆಗಳ ಸರ್ಪಗಾವಲು ಹಾಕಲಾಗಿದೆ. ಪ್ರತಿ ಪ್ರಜೆಯನ್ನೂ ತಪಾಸಣೆ ಮಾಡಲಾಗುವುದು ಜತೆಗೆ ಪ್ರತಿಯೊಂದು ಮನೆಯನ್ನೂ ತಪಾಸಣೆಗೊಳಪಡಿಸಲಾಗುತ್ತದೆ. ಉತ್ತರ ಕೊರಿಯದ ಅಧ್ಯಕ್ಷ ಕಿಮ್ಜಾನ್ ಉಂಗ್ನ ಕ್ರೌರ್ಯಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಅಧಿಕಾರಕ್ಕಾಗಿ ತನ್ನ ಸ್ವಂತ ಚಿಕ್ಕಪ್ಪನನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ರಾಷ್ಟ್ರದ ಇನ್ನೊಂದು ಹವ್ಯಾಸವೆಂದರೆ ಮೋಜಿಗಾಗಿ ಜನರನ್ನು ಕೊಲ್ಲುವುದು..!