
ಮುಂಬಯಿ: ರಿಯೊ ಒಲಿಂಪಿಕ್ಸ್‌ಗೆ ರಾಯಭಾರಿಯಾಗಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಆಯ್ಕೆಯಾಗಿರುವ ಕುರಿತು ಹಲವರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಆದರೆ ಇಲ್ಲಿ ಮತ್ತೊಂದು ಕೂತುಹಲಕಾರಿ ವಿಷಯವೆಂದರೇ ಸಲ್ಮಾನ್ ಖಾನ್ ರನ್ನು ರಿಯೋ ಒಲಂಪಿಕ್ಸ್ ರಾಯಭಾರಿಯನ್ನಾಗಿ ಮಾಡಿರುವ ನೇಮಕವನ್ನು ಕೈ ಬಿಡುವಂತೆ ಐಶ್ವರ್ಯ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸಲ್ಮಾನ್‌ರನ್ನು ರಾಯಭಾರಿ ಮಾಡಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಐಶ್ವರ್ಯ ರೈ ಹೆಸರಿನಲ್ಲಿ ಬೇರೆ ಯಾರೋ ಈ ಕೆಲಸ ಮಾಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಭಾರತದ ಅಥ್ಲೆಟಿಕ್ಸ್ ತಂಡದ ರಾಯಭಾರಿ ಆಗಿ ನಟ ಸಲ್ಮಾನ್ ಆಯ್ಕೆ ಮಾಡಿರುವುದು ಕುಸ್ತಿಪಟು ಯೋಗೇಶ್ವರ್ ದತ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.