
ಅಲಿಘಡ: ರವಿವಾರ ಬೆಳಗಿನಜಾವ ಅಲಿಗಢ ಮುಸ್ಲಿಂ ವಿವಿಯ(ಎಎಂಯು)ಲ್ಲಿ ಎರಡು ಸ್ಥಳೀಯ ಗುಂಪು ಘರ್ಷಣೆ ವೇಳೆ ಪೊಲೀಸರು ನಡೆಸಿದ ಫೈರಿಂಗ್ನಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ವಿವಿಯ ಮುಮ್ತಾಜ್ ವಸತಿ ನಿಲಯದಲ್ಲಿನ ವಿದ್ಯಾರ್ಥಿಯೊಬ್ಬನ ಮೇಲೆ ಒಂದು ಗುಂಪು ಹಲ್ಲೆ ನಡೆಸಿ ಅವರ ಕೋಣೆಗೆ ಬೆಂಕಿ ಹಚ್ಚಿದಾಗ ಈ ಘರ್ಷನೆ ಅರಂಭವಾಯಿತು ಎಂದು ಡಿಐಜಿ ಗೋವಿಂದ ಅಗರ್ವಾಲ್ ಹೇಳಿದ್ದಾರೆ. ವಿದ್ಯಾರ್ಥಿ ಮೇಲಿನ ಹಲ್ಲೆ ಸುದ್ದಿ ಹರಡುತ್ತಿದ್ದಂತೆ ಎರಡು ಗುಂಪಿನ ವಿದ್ಯಾರ್ಥಿಗಳು ದಾಂಧಲೆಗಿಳಿದಿರು. ಅವರನ್ನು ನಿಯಂತ್ರಿಸಲು ಗುಂಡು ಹಾರಿಸಿದಾಗ ಒಬ್ಬ ವಿದ್ಯಾರ್ಥಿ ಗುಂಡಿಗೆ ಬಲಿಯಾಗಿದ್ದಾನೆ.
ವಿವಿ ಆವರಣದಲ್ಲೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸ್ ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ನಿಯೋಜಿಸಲಾಗಿದೆ. ಇಂಜಿನಿಯರಿಂಗ್ ಕಾಲೇಜಿನ ಎಂಟ್ರೆನ್ಸ್(ಪ್ರವೇಶ) ಪರೀಕ್ಷೆ ಇಂದು ನಡೆಯಲಿದ್ದು, ಅಲಿಘಡ ವಿವಿ ಕ್ಯಾಂಪಸ್ ಒಂದರಿಂದಲೇ ಸುಮಾರು 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.