
ಮಂಗಳೂರು, ಎಪ್ರಿಲ್.16 : ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದ ಶ್ರೀರಾಮ ಸೇನೆ ರಾಷ್ಟ್ರೀಯ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ತಡೆದು ಜಿಲ್ಲೆಯಿಂದ ಹೊರ ಕಳಿಸಿದ ವಿದ್ಯಾಮಾನವೊಂದು ಶನಿವಾರ ನಡೆದಿದೆ.
2009ರಲ್ಲಿ ನಡೆದ ಪಬ್ ದಾಳಿ ಪ್ರಕರಣದ ವಿಚಾರಣೆಗಾಗಿ ಇಂದು ನಗರದ ನ್ಯಾಯಾಲಯಕ್ಕೆ ಹಾಜಾರಾಗಲು ಬಂದ ಶ್ರೀರಾಮ ಸೇನೆ ರಾಷ್ಟ್ರೀಯ ಮುಖಂಡ ಪ್ರಮೋದ್ ಮುತಾಲಿಕ್ ಅವರು ವಿಚಾರಣೆ ಮುಗಿಸಿದ ಬಳಿಕ ಸಂಜೆ ನಗರದ ಆಳಪೆಯಲ್ಲಿ ಅಯೋಜಿಸಲಾದ 14ನೇ ವಾರ್ಷಿಕ ಸಾಮೂಹಿಕ ಶನೇಶ್ಚರ ಪೂಜೆಯಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳಲ್ಲು ವ್ಯವಸ್ಥೆಗೊಳಿಸಲಾಗಿತ್ತು.

ಆದರೆ ಕಾರ್ಯಕ್ರಮದ ಬಗ್ಗೆ ಮೊದಲೇ ಮಾಹಿತಿ ಪಡೆದ ಮಂಗಳೂರು ನಗರ ಪೊಲೀಸ್ ಅಯುಕ್ತರಾದ ಎಸ್.ಚಂದ್ರಶೇಖರ್ ಅವರು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ತಮ್ಮ ಆಕ್ರೋಷಭರಿತ ಭಾಷಣಗಳ ಮೂಲಕ ಕೋಮು ಸೌಹಾರ್ಧ ಕೆಡಿಸುತ್ತಾರೆ ಎಂಬ ಆರೋಪಕ್ಕೆ ಗುರಿಯಗಿರುವ ಮುತಾಲಿಕ್ ಅವರಿಗೆ ಎಪ್ರಿಲ್ 16ರಿಂದ ಎಪ್ರಿಲ್ 22ರವರೆಗೆ ಏಳು ದಿನಗಳ ಕಾಲ ಜಿಲ್ಲೆಯಲ್ಲಿ ಯಾವೂದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಂತೆ ಸಿಆರ್ಪಿ ಸೆಕ್ಷನ್ 144ರ ಅನ್ವಯ ನಿರ್ಬಂಧ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಮುತಾಲಿಕ್ ಅವರು ಯಾವೂದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದು ಅಥವಾ ಮಾದ್ಯಮಕ್ಕೆ ಹೇಳಿಕೆ ನೀಡದಂತೆ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಿ...