ಮನೋರಂಜನೆ

ನಾಳೆ ಸಪ್ತಪದಿ ತುಳಿಯಲಿದ್ದಾರೆ ಕ್ರಿಕೆಟರ್ ರವೀಂದ್ರ ಜಡೇಜ

Pinterest LinkedIn Tumblr

Ravindra Jadeja  And Riva Solanki

ರಾಜ್ ಕೋಟ್: ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ರವೀಂದ್ರ ಜಡೇಜಾ ನಾಳೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಗೆಳತಿ ರಿವಾ ಸೋಲಂಕಿಯನ್ನ ವರಿಸುತ್ತಿರುವ ರವೀಂದ್ರ ಜಡೇಜಾ ಇಂದು ನಡೆಯುತ್ತಿರುವ ಐಪಿಎಲ್ ಪಂದ್ಯಕ್ಕೆ ಅಲಭ್ಯವಾಗಿದ್ದಾರೆ.

ಏಪ್ರಿಲ್ 21 ರಂದು ಸನ್ ರೈಸ್ ಹೈದ್ರಾಬಾದ್ ತಂಡದ ವಿರುದ್ಧ ರಾಜ್ ಕೋಟ್ ನಲ್ಲಿ ನಡೆಯುವ ಐಪಿಎಲ್ ಪಂದ್ಯದಲ್ಲೂ ಭಾಗವಹಿಸುವ ಸಾಧ್ಯತೆಗಳು ಕಡಿಮೆ ಇದೆ ಎಂದು ಗುಜರಾತ್ ಲಯನ್ಸ್ ಟೀಮ್ ತಿಳಿಸಿದೆ.

ರವೀಂದ್ರ ಜಡೇಜಾ ತಂಡದ ಪ್ರಮುಖ ಆಟಗಾರನಾಗಿದ್ದು, ಪುಣೆ ಸೂಪರ್ ಗೈಂಟ್ಸ್ ತಂಡದ ಎರಡು ವಿಕೆಟ್ ಕಬಳಿಸಿದ್ದರು. ಇನ್ನೂ ನಾಳೆ ಸಂಜೆ ನಡೆಯುವ ರವೀಂದ್ರ ಜಡೇಜಾ ವಿವಾಹ ಕಾರ್ಯಕ್ರಮದಲ್ಲಿ ಗುಜರಾತ್ ಲಯನ್ಸ್ ತಂಡದ ಆಟಗಾರರು ಭಾಗವಹಿಸಲಿದ್ದಾರೆ.

Write A Comment