
ಫೋಟೋ: ಅಶೋಕ್ ಬೆಳ್ಮಣ್
ಯು.ಎ.ಇ. ಬಂಟರ 42ನೇ ಸ್ನೇಹಮಿಲನ ಮತ್ತು ಬಂಟ್ ವಿಭೂಷಣ ಪ್ರಶಸ್ತಿ ಪ್ರಧಾನ, ಬಂಟ್ಸ್ ಫರ್ಪೆಕ್ಟ್ ಜೋಡಿ ಸ್ಪರ್ಧೆ 2016 ಏಪ್ರಿಲ್ 15ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.30 ರಿಂದ ದುಬಾಯಿ ಕ್ರೌನ್ ಫ್ಲಾಜಾ ಹೋಟೆಲ್ ಜುಮೇರಾ ಸಭಾಂಗಣದಲ್ಲಿ ದಿನಪೂರ್ತಿ ಅದ್ಧೂರಿಯಾಗಿ ನಡೆಯಿತು.
ಯು.ಎ.ಇ. ಬಂಟ್ಸ್ ಮಹಾಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ
ಯು.ಎ.ಇ. ಹಿರಿಯ ಉಧ್ಯಮಿ ಬಂಟ್ಸ್ ಸಂಘಟನೆಯ ಮಹಾಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರು ಮತ್ತು ಡಾ. ಚಂದ್ರಕುಮಾರಿ ಆರ್. ಶೆಟ್ಟಿ, ಶ್ರೀ ಬಿನಯ್ ಆರ್. ಶೆಟ್ಟಿ ಹಾಗೂ ಊರಿನಿಂದ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಕದ್ರಿ ನವನೀತ್ ಶೆಟ್ಟಿ. ಚಕ್ರವರ್ತಿ ಸೂಲಿಬೆಲೆ ಮತ್ತು ಇನ್ನಿತರ ಗಣ್ಯರೊಂದಿಗೆ ಕೇರಳದ ಪಂಚವಾದ್ಯದೊಂದಿಗೆ, ಬಂಟ ಸುಮಂಗಲೆಯರು ಪೂರ್ಣಕುಂಭ ಕಲಶದೊಂದಿಗೆ ಮೆರವಣಿಯಲ್ಲಿ ವೇದಿಕೆಗೆ ಬರಮಾಡಿಕೊಂಡರು. ಕಾರ್ಯಕಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಜ್ಯೋತಿಬೆಳಗಿಸಿ ಬಂಟರ ಕೂಡುಕಟ್ ಸಮಾರಂಭಕ್ಕೆ ಅಧಿಕೃತ ಚಾಲನೆ ನೀಡಿದರು.













ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಸಮಸ್ಥ ಬಂಟ ಬಾಂಧವರಿಗೆ ಬಿಸು ಹಬ್ಬದ ಮತ್ತು ರಾಮನವಮಿಯ ಶುಭಾಶಯ ಕೋರಿ ಸ್ವಾಗತಿಸಿದರು. ಶಾನೆಲ್ ಶರತ್ ತಂಡದವರಿಂದ ಸ್ವಾಗತ ನೃತ್ಯ, ಪ್ರವೀಣ್ ತಂಡದವರಿಂದ ಶಿವತಾಂಡವ ನೃತ್ಯ ಸರ್ವರ ಮನ ಸೆಳೆಯಿತು. ಶ್ರೀಮತಿ ಅಮಿತಾ ಬಾಲಕೃಷ್ಣ ಶೆಟ್ಟಿಯವರು ಕಾರ್ಯಕಾರಿ ಸಮಿತಿಯ ಪರವಾಗಿ ಸ್ವಾಗತಿಸಿದರು. ಮೋನಿಷಾ ಶರತ್ ಶೆಟ್ಟಿ ದುಬಾಯಿ ತಂಡದವರಿಂದ ಬಾಲಿವುಡ್ ಪ್ಯೂಷನ್, ಅಬುಧಾಬಿಯಿಂದ ಸುಧೀರ್ ಶೆಟ್ಟಿ ತಂಡದವರ ಥಂಡರಿಂಗ್ ಕಿಡ್ಸ್ ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು.
ಚಕ್ರವರ್ತಿ ಸೂಲಿಬೆಲೆಯವರಿಂದ ಭಾರತ ದರ್ಶನ ಪ್ರವಚನ





ಯು.ಎ.ಇ.ಯಲ್ಲಿ ಕನ್ನಡ ಕಾರ್ಯಕ್ರಮಕ್ಕೆ ಬಂದಿದ್ದ ಶ್ರೀ ಚಕ್ರವರ್ತಿ ಸೂಲಿಬೆಲೆಯರು ಯು.ಎ.ಇ. ಬಂಟರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿ ಗೌರವ ಸ್ವೀಕರಿಸಿ ನಂತರ ಭವ್ಯ ಭಾರತದ ಸುಂದರ ವರ್ಣನೆಯನ್ನು ತಮ್ಮ ಅದ್ಭುತ ವಾಕ್ ಚಾತುರ್ಯದಲ್ಲಿ ಶ್ಲೋಕಗಳೊಂದಿಗೆ ಪ್ರೇಕ್ಷಕ ವರ್ಗಕ್ಕೆ ನೀಡಿ ಭಾರತೀಯತೆಯ ಅಭಿಮಾನದ ದೇಶಭಕ್ತಿಯನ್ನು ಜಾಗೃತಿಗೊಳ್ಳಿಸುವ ಪ್ರವಚನ ನೀಡಿದರು.



























2016-17ನೇ ಸಾಲಿನ ನೂತನ ಸಮಿತಿಗೆ ಸದಸ್ಯರನ್ನು ವೇದಿಕೆಗೆ ಬರಮಾಡಿಕೊಂಡು ಸಭೆಗೆ ಪರಿಚಯಿಸಿ ಶುಭಹಾರೈಸಲಾಯಿತು. ಪ್ರಸ್ತುತ ಕಾರ್ಯನಿರ್ವಹಿಸಿದ ಕಾರ್ಯಕಾರಿ ಸಮಿತಿಗೆ ಅಭಿನಂದನೆ ಸಲ್ಲಿಸಿ ಸರ್ವೋತ್ತಮ ಶೆಟ್ಟಿಯವರು ಬಿಳ್ಕೊಟ್ಟರು.
ಜೋಗಿ ವೀಣಾ ಸತೀಶ್ ಶೆಟ್ಟಿ ತಂಡ ದುಬಾಯಿ ತಂಡದ ಬಾಲಿವುಡ್ ರಾಕರ್ಸ್, ಅಲ್ ಐನ್ ರಜನಿ ದಿಲಿಪ್ ತಂಡದ ಮಲೆನಾಡಿನ ಆಟ, ತುಳುನಾಡಿನ ಕುಣಿತ, ಅಬುಧಾಬಿ ಸುಪ್ರಿಯಾ ಕಿರಣ್ ರೈ ಮತ್ತು ಆಶಾ ಜಯರಾಂ ರೈ ನಿರ್ದೇಶನದಲ್ಲಿ ಮೂಡಿಬಂದ ಮಕ್ಕಳ ಕಥಕ್ ನೃತ್ಯ ಮನಸೂರೆಗೊಂಡವು.
ಯು.ಎ.ಇ. ಬಂಟ್ಸ್ ಪ್ರತಿಷ್ಠಿತ “ಬಂಟ ವಿಭೂಷಣ ಪ್ರಶಸ್ತಿ” ಕದ್ರಿ ನವನೀತ್ ಶೆಟ್ಟಿಯವರಿಗೆ ಪ್ರಧಾನ








ಕರ್ನಾಟಕ ಹಾಗೂ ವಿದೇಶಗಳಲ್ಲಿ ತುಳು ಭಾಷೆ, ಸಂಸ್ಕೃತಿಗೆ ನೀಡಿರುವ ಗಣನೀಯ ಸೇವೆ, ಯಕ್ಷಗಾನ, ನಾಟಕ, ಕ್ರೀಡೆ. ಸಾಮಾಜಿಕ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಪರಿಗಣಿಸಿ ಯು.ಎ.ಇ. ಬಂಟರ 42ನೇ ಕೂಡುಕಟ್ಟ್ ಸಮಾರಭದಲ್ಲಿ ಶ್ರೀ ಕದ್ರಿ ನವನೀತ್ ಶೆಟ್ಟಿಯವರಿಗೆ “ಬಂಟ ವಿಭೂಷಣ ಪ್ರಶಸ್ತಿ”ಯನ್ನು ಸಮಸ್ಥ ಬಂಟ ಸಮುದಾಯ ದ ಸಮ್ಮುಖದಲ್ಲಿ ಡಾ. ಬಿ. ಆರ್. ಶೆಟ್ಟಿಯವರು ನೀಡಿ ಗೌರವಿಸಿದರು ಸನ್ಮಾನ ಪತ್ರವನ್ನು ಶ್ರೀ ಗಣೇಶ್ ರೈ ವಾಚಿಸಿದರು. ಸನ್ಮಾನ ಪ್ರಕ್ರೀಯೆಯನ್ನು ಸರ್ವೋತ್ತಮ ಶೆಟ್ಟಿಯವರು ನೆರವೇರಿಸಿದರು.





ಎಲ್ಲಾ ಪ್ರಾಯೋಜಕರನ್ನು, ಮಾಧ್ಯಮ ಪ್ರತಿನಿಧಿಗಳನ್ನು, ಶೈಕ್ಷಣಿಕದಲ್ಲಿ ಅತ್ಯಂತ ಹೆಚ್ಚು ಅಂಕಗಳಿಸಿದ ಮಕ್ಕಳು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳನ್ನು, ಬಂಟ್ಸ್ ಥೋಬಾಲ್ ದುಬಾಯಿ ವಿಜಯಿ ಮಹಿಳಾ ಥ್ರೋಬಾಲ್ ತಂಡ, ಪುರುಷರ ಥ್ರೋಬಾಲ್ ತಂಡದವರನ್ನು ಹಾಗೂ ಬಂಟ್ಸ್ ಶ್ರೀ ಸತ್ಯನಾರಾಯಣ ಪೂಜಾ ಜವಬ್ಧಾರಿ ವಹಿಸಿದ್ದ ಶ್ರೀ ರವಿರಾಜ್ ಶೆಟ್ಟಿ ಶ್ರೀಮತಿ ಶಶಿ ಶೆಟ್ಟಿ, ಬಂಟ್ಸ್ ರಕ್ತದಾನ ಶಿಬಿರ – ಶ್ರೀ ಉದಯ ಶೆಟ್ಟಿ ಶ್ರೀಮತಿ ಶಶಿ ಶೆಟ್ಟಿ ದಂಪತಿ, ಬಂಟ್ಸ್ ಕ್ರೀಡಾಕೂಟ ಜವಬ್ಧಾರಿ ವಹಿಸಿದ್ದ ಕಿರಣ್ ಶೆಟ್ಟಿ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.







ಗಣೇಶ್ ಶೆಟ್ಟಿ ತಂಡದವರಿಂದ – ಉದಯಣ್ಣನ ಹೋಟೆಲ್, ಕಿರುನಾಟಕ ಪ್ರದರ್ಶನ ಮತ್ತು ದೃತಿ ವೆಂಕಟೇಶ್, ವಿಜಯ ಜೋಗಿ ಶೋ ನೃತ್ಯ ಪ್ರದರ್ಶನ ನೀಡಿದರು.
ದಿನಪೂರ್ತಿ ನಡೆದ ಸ್ಪರ್ಧೆಯ ತಂಡದ ನಿರ್ದೇಶಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಾನಪದ ನೃತ್ಯ ಸ್ಪರ್ಧೆಯಲ್ಲಿ “ಸಂಗೊಳ್ಳಿ ರಾಯಣ್ಣ” ತಂಡ ಪ್ರಥಮ ಸ್ಥಾನ
ವಿವಿಧ ವಯೋಮಿತಿಯ ಜನಪದ ನೃತ್ಯ ತಂಡಗಳಾದ ಸಂಗೋಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಓನಕೆ ಒಬ್ಬವ್ವ, ಮಯೂರ ವರ್ಮ ತಂಡ ಹೆಸರಿನಲ್ಲಿ ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿ ಜನ ಮೆಚ್ಚುಗೆಯನ್ನು ಪಡೆದರು.
ಪ್ರಥಮ ಸ್ಥಾನ : “ಸಂಗೊಳ್ಳಿ ರಾಯಣ್ಣ” ಶಾರ್ಜಾ ತಂಡ. ನೃತ್ಯ ಸಂಯೋಜನೆ – ವಿಜಯ ಮತ್ತು ಯತೀಶ್. ಸಂಘಟಕರು – ನಿಶಿತಾ ರಾಕೇಶ್ ಹೆಗ್ಡೆ
ಪ್ರಥಮ ರನ್ನರ್ ಅಪ್ : “ಮಯೂರ ವರ್ಮ ” ದುಬಾಯಿ ತಂಡ. ನೃತ್ಯ ಸಂಯೋಜನೆ- ಸಚಿನ್ ಮಾಡಾ ಮತ್ತು ಪ್ರಸನ್ನ ಕುಮಾರ್, ಸಂಘಟಕರು – ಸಚಿನ್ ಮಾಡಾ
ದ್ವಿತೀಯ ರನ್ನರ್ ಅಪ್ : “ಓನಕೆ ಓಬ್ಬವ್ವ ” ಅಬುಧಾಬಿ ತಂಡ. ನೃತ್ಯ ಸಂಯೋಜನೆ – ಸೌಮ್ಯ ಜೈನ್, ಸಂಘಟಕರು – ಅಮಿತಾ, ಅನಿಶಾ, ಸಪ್ನ
ಬಂಟ್ಸ್ ಪರ್ಫೆಕ್ಟ್ ಜೋಡಿ ವಿಜೆತರು ; ರಾಹುಲ್ ಶೆಟ್ಟಿ ತೃಪ್ತಿ ರಾಹುಲ್ ಶೆಟ್ಟಿ








ಯು.ಎ.ಇ. ಬಂಟ್ಸ್ ಆಶ್ರಯದಲ್ಲಿ ಈ ವರ್ಷದ ವಿಶೇಷ ಸ್ಪರ್ಧೆ 10 ವರ್ಷದ ಒಳಗಿನ ಬಂಟ ದಂಪತಿಗಳ ಏರ್ಪಡಿಸಲಾದ “ಬಂಟ್ಸ್ ಪರ್ಫೆಕ್ಟ್ ಜೋಡಿ” ಸ್ಪರ್ಧೆಯಲ್ಲಿ ಆಯ್ಕೆಯಾದ ಒಂಬತ್ತು ಜೋಡಿಗಳು ಅಂತಿಮ ಸುತ್ತಿನಲ್ಲಿ ಸರ್ವರ ಮೆಚ್ಚುಗೆ ಪಡೆದರು.
ಸ್ಪರ್ಧೆಯಲ್ಲಿ ಜಯಭೇರಿ ಪಡೆದ ಬಂಟ ದಂಪತಿಗಳು
ಮೋಸ್ಟ್ ಫ್ಯಾಶನೆಬಲ್ ಜೋಡಿ, ಮೋಸ್ಟ್ ಎಂಟರಟೈನ್ಮೆಂಟ್ ಜೋಡಿ ಮತ್ತೌ ಜಯಭೇರಿ ಪಡೆದ ಜೋಡಿ : ರಾಹುಲ್ ಶೆಟ್ಟಿ ತೃಪ್ತಿ ರಾಹುಲ್ ಶೆಟ್ಟಿ ದಂಪತಿಗಳು
ಜನಪ್ರಿಯ ಜೋಡಿ : ಪ್ರತೀಕ್ ಆಳ್ವ ಮತ್ತು ಸೋನಂ ಆಳ್ವ
ಪ್ರಥಮ ರನ್ನರ್ ಅಪ್ : ಪ್ರತೀಕ್ ಆಳ್ವ ಮತ್ತು ಸೋನಂ ಪ್ರತೀಕ್ ಆಳ್ವ
ದ್ವಿತೀಯ ರನ್ನ ಅಪ್ : ಕರುಣಾಕರ್ ಶೆಟ್ಟಿ ಮತ್ತು ಸಪ್ನಾ ಕರುಣಾಕರ್ ಶೆಟ್ಟಿ.









ಪ್ರಥಮ ದ್ವಿತೀಯ ಹಂತದ ಜವಬ್ಧಾರಿಯನ್ನು ದೀಪ್ತಿ, ಚಿತ್ರಾ, ಮನೋಜ್ ವಹಿಸಿದ್ದರು, ತೀರ್ಪುಗಾರರಾಗಿ ಕವಿತಾ, ಜ್ಯೋತಿ, ಶಕೀಲ್ ತಮ್ಮ ಕಾರ್ಯವನ್ನು ನಿರ್ವಹಿಸಿದ್ದರು. ಅಂತಿಮ ಸುತ್ತಿನ ಸ್ಪರ್ಧೆಯನ್ನು ಅತ್ಯಂತ ಸೊಗಸಾಗಿ ಅರ್ಥಪೂರ್ಣವಾಗಿ ಸಂಸ್ಕೃತಿ ಸಂಪ್ರದಾಯಗಳನ್ನು ಅಳವಡಿಸಿಕೊಂಡು ಶ್ರೀ ಕದ್ರಿ ನವನೀತ ಶೆಟ್ಟಿಯವರು ತಮ್ಮ ವಿಶೇಷ ಶೈಲಿಯ ನಿರೂಪಣೆಯಲ್ಲಿ ನಡೆಸಿಕೊಟ್ಟರು.
ತೀರ್ಪುಗಾರರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.






























ಸಂಪತ್ ಶೆಟ್ಟಿ, ಜ್ಯೋತಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿಕೊಟ್ಟರು.
ಅಂತಿಮ ಘಟ್ಟದಲ್ಲಿ ಇನ್ಲ್ಯಾಂಡ್ ಬಿಲ್ಡರ್ಸ್, ಮಲಬಾರ್ ಗೋಲ್ಡ್ ಮತ್ತು ಅದೃಷ್ಟ ಚೀಟಿ ಡ್ರಾ ನಡೆಯಿತು.
ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಪ್ರಸನ್ನ ಶೆಟ್ಟಿ, ಚಿತ್ರ ಪ್ರಸನ್ನ ಶೆಟ್ಟಿ, ವಿವೇಕ್ ಶೆಟ್ಟಿ, ವಿಜೇತಾ ಶೆಟ್ಟಿ, ನಾಗರಾಜ ಶೆಟ್ಟಿ, ದೀಪ್ತಿ ನಾಗರಾಜ ಶೆಟ್ಟಿ, ದಿವಾಕರ ಶೆಟ್ಟಿ, ಸುಪ್ರಿತಾ ಶೆಟ್ಟಿ, ಸುಬ್ರತ್ ಶೆಟ್ಟಿ, ನಾಗರಾಜ ಶೆಟ್ಟಿ, ಸುಧೀರ್ ಶೆಟ್ಟಿ, ಸುಧಾ ಸುಧೀರ್ ಶೆಟ್ಟಿ, ಗುರುಪ್ರಸಾದ್ ಭಂಡಾರಿ, ಶಕೀಲಾ ಭಂಡಾರಿ, ಸುಧೀರ್ ಹೆಗ್ಡೆ, ಅನಿಶಾ ಸುದೀರ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿ, ಅಮಿತಾ ಬಾಲಕೃಷ್ಣ ಶೆಟ್ಟಿ, ನಾಗರಾಜ ಶೆಟ್ಟಿ ಮತ್ತು ರಜನಿ ನಾಗರಾಜ ಶೆಟ್ಟಿ ಇವರುಗಳ ಅವಿರತ ಶ್ರಮದ ಫಲವೇ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಬಿ. ಕೆ. ಗಣೇಶ್ ರೈ – ಯು.ಎ.ಇ.










































































































