ಬೆಂಗಳೂರು, ಏ. 16 : ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ರಾಜ್ಯ ರಾಜಕಾರಣಕ್ಕೆ ಮರಳಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇದೀಗ ನೂತನ ಕಾರನ್ನು ಖರೀದಿಸಿದ್ದಾರೆ. ಟೊಯೋಟಾ ಪ್ರಡೊ ಕಾರೊಂದನ್ನು ಖರೀದಿಸಿ ಪ್ರವಾಸ ಕೈಗೊಳ್ಳಲು ಸಿದ್ಧರಾಗಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ಪಕ್ಷದ ಕಾರನ್ನು ಬಳಸದಿರಲು ನಿರ್ಧರಿಸಿದ್ದು ರಾಜ್ಯ ಪ್ರವಾಸಕ್ಕೆ ತನ್ನ ಕಾರನ್ನೆ ಬಳಸಲಿದ್ದಾರೆ. ಈ ನಡುವೆ ಪ್ರಹ್ಲಾದ್ ಜೋಷಿ ಅವರು ಅಧ್ಯಕ್ಷರಾಗಿದ್ದಾಗ ಪಕ್ಷದ ಕಾರನ್ನು ಬಳಸುತ್ತಿದ್ದರು. ಬಿಎಸ್ ವೈ ಖರೀದಿಸಿರುವ ಪ್ರಡೊ ಕಾರಿನಲ್ಲಿ ಹೈಟೆಕ್ ಸೌಲಭ್ಯವಿದ್ದು, ಕಾರಿನೊಳಗೆ ನಿಂತು ಜನರತ್ತ ಕೈಬೀಸುವ ವ್ಯವಸ್ಥೆ ಇದೆ. ಕಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರ ‘ನೇಮ್ ಪ್ಲೇಟ್ ಅಳವಡಿಸಲಾಗಿದ್ದು, ಕೆಎ.೦3, ಎಂವೈ4545ನಂಬರ್ ನಲ್ಲಿ ಕಾರು ನೊಂದಣಿಯಾಗಿದೆ.
ಈ ಕಾರಿನ ಬೆಲೆ ಭಾರತದಲ್ಲಿ 92.35 ಲಕ್ಷ ರೂ. ಗಳಾಗಿದ್ದು,ಕಾರಿನ ಒಳಗಡೆ ವಿನ್ಯಾಸ ಸೇರಿ 1 ಕೋಟಿ ರೂ. ಅಧಿಕ ವೆಚ್ಛವನ್ನು ಬಿಎಸ್ ವೈ ಮಾಡಿದ್ದಾರೆ ಎನ್ನಲಾಗಿದೆ.