
ಕುಂದಾಪುರ: ಮೆಡಿಕಲ್ ಸ್ಟೋರ್ ಒಳಕ್ಕೆ ನುಗ್ಗಿದ ಕಳ್ಳರು ಒಳಗಿದ್ದ ಸಿ.ಸಿ. ಕ್ಯಾಮೆರಾ ಕದ್ದೊಯ್ದ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಸಿದ್ದಾಪುರದ ಕಡ್ರಿ ಎಂಬಲ್ಲಿ ಶ್ರೀಕೃಷ್ಣ ಮೂರ್ತಿ ಮಾಲೀಕತ್ವದ ಶ್ರೀಕೃಷ್ಣ ಮೆಡಿಕಲ್ ನಲ್ಲಿ ಈ ಕಳ್ಳತನ ನಡೆದಿದೆ.
ತಡರಾತ್ರಿ ಮೇಲ್ಮಾಡಿನ ಹೆಂಚು ಕಿತ್ತು ಒಳಪ್ರವೇಶಿಸಿದ ಕಳ್ಳರು ಸಿಸಿ ಕ್ಯಾಮರಾದ ರಿಸೀವರ್ , ಹಾರ್ಡ ಡಿಸ್ಕ್, ಮೋಡೆಮ್ ಗಳನ್ನು ಕಳವುಗೈದಿದ್ದಾರೆ. ಬೆಳಿಗ್ಗೆ ಮೆಡಿಕಲ್ ಶಾಪ್ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದ್ದು ಕಳವಾದ ಸಿ.ಸಿ. ಕ್ಯಾಮೆರಾದ ಒಟ್ಟು ಮೌಲ್ಯ 16,000 ಸಾವಿರ.
ಘಟನಾ ಸ್ಥಳಕ್ಕೆ ಶಂಕರನಾರಾಯಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
(ಸಾಂದರ್ಭಿಕ ಚಿತ್ರ)