ರಾಷ್ಟ್ರೀಯ

ಕನ್ಹಯ್ಯಾ ಮೇಲೆ ಚಪ್ಪಲಿ ಎಸೆತ, ಹೈದರಾಬಾದ್​ನಲ್ಲಿ ನಡೆದ ಘಟನೆ

Pinterest LinkedIn Tumblr

kanhayya-webಹೈದರಾಬಾದ್: ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೆಎನ್​ಯುು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ಚಪ್ಪಲಿ ಎಸೆದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ರಾಷ್ಟ್ರವಿರೋಧಿ ಘೊಷಣೆ ಕೂಗಿದ್ದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಕನ್ಹಯ್ಯಾ ಮೂರು ವಾರಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಸೆಮಿನಾರ್​ನಲ್ಲಿ ಭಾಗವಹಿಸಲು ಹೈದರಾಬಾದ್ ವಿಜಯವಾಡಕ್ಕೆ ಭೇಟಿ ನೀಡಿದ್ದನು. ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ವೇಳೆ ಸಭಿಕರ ಕುಳಿತ ಎರಡನೆಯ ಸಾಲಿನಲ್ಲಿದ್ದ ಯುವಕರ ಗುಂಪೊಂದು ಕನ್ಹಯ್ಯಾ ವಿರುದ್ಧ ಘೂಷಣೆಗಳನ್ನು ಕೂಗಿ ಚಪ್ಪಲಿ ಎಸೆದಿದ್ದಾರೆ.

ಇವರನ್ನು ನಂತರ ಪೊಲೀಸರು ಬಂಧಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಕನ್ಹಯ್ಯಾ ‘‘ನೀವು ಏನು ಬೇಕಾದರೂ ಮಾಡಿಕೊಳ್ಳಿ. ಆದರೆ ಅವುಗಳಗೆ ಹೆದರುವವ ನಾನಲ್ಲ. ನನ್ನದು ಗಾಂಧಿವಾದಿ ದಾರಿ’’ ಎಂದು ಪ್ರತಿಕ್ರಿಯೆ ನೀಡಿದ್ದಾನೆ.

Write A Comment