
ಕೊಪ್ಪಳ: ದುಷ್ಕರ್ಮಿಗಳು ಇಂಡಿಕ್ಯಾಶ್ ಎಟಿಎಂ ಬಾಕ್ಸ್ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಮರ್ಲಾನಹಳ್ಳಿಯಲ್ಲಿ ನಡೆದಿದೆ.
ರಾತ್ರಿ ವೇಳೆ ಹಣ ತೆಗೆದುಕೊಳ್ಳುವ ನೇಪದಲ್ಲಿ ಬಂದ ದುಷ್ಕರ್ಮಿಗಳು ಇಂಡಿಕ್ಯಾಶ್ ಎಟಿಎಂ ಕಳ್ಳತನ ಮಾಡಿದ್ದಾರೆ. ಇಂದು ಬೆಳಗ್ಗೆ ಹಣ ಡ್ರಾ ಮಡಿಕೊಳ್ಳಲು ಬಂದ ಗ್ರಾಹಕರು ನೋಡಿದಾಗ ಎಟಿಎಂ ಯಂತ್ರ ಕಳ್ಳತನವಾಗಿರುವುದು ಗೊತ್ತಾಗಿದೆ.
ಸ್ಥಳಕ್ಕೆ ಕಾರಟಗಿ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂಡಿಕ್ಯಾಶ್ ಕಂಪನಿಯ ಮ್ಯಾನೇಜರ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಎಟಿಎಂನಲ್ಲಿ 5 ಲಕ್ಷ ರೂ. ಹಣ ಇಡಬಹುದು. ಆದ್ರೆ ಎಟಿಎಂ ಮುಂದೆ ಕಂಪನಿ ಯಾವುದೇ ಕಾವಲುಗಾರನನ್ನು ಹಾಕಿರಲಿಲ್ಲ ಎಂದು ಹೇಳಿದ್ದಾರೆ.