
ಎಂ ಪ್ರೆಂಡ್ಸ್ ಮಂಗಳೂರು (ರಿ) ಇದರ ವತಿಯಿಂದ ರಾಫಿ ಹೋಟೆಲ್ ದೇರಾ ದುಬೈಯಲ್ಲಿ “ದುಬೈ ಮಿಲನ 2016″ ಕಾರ್ಯಕ್ರಮ ಮಾ.25 ರಂದು ನಡೆಯಲಿದೆ ಎಂದು ಎಂ. ಪ್ರೆಂಡ್ಸ್ ಮಂಗಳೂರು ತಂಡ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಎಂ ಪ್ರೆಂಡ್ಸ್ ಅಧ್ಯಕ್ಷ ಹಾಗೂ ರಾಜ್ಯ ಆರೋಗ್ಯ ಸಚಿವ ಯು.ಟಿ ಖಾದರ್ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅಥಿತಿಗಳಾಗಿ ಕರ್ನಾಟಕ ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ ಭಾಗವಹಿಸಲಿದ್ದಾರೆ ಹಾಗೂ ಗೌರವಾನ್ವಿತ ಅಥಿತಿಗಳಾಗಿ ಕರ್ನಾಟಕ ಸರಕಾರ ಅರಣ್ಯ ಮತ್ತು ಪರಿಸರ ಜೀವಿ ಶಾಸ್ತ್ರ ಸಚಿವ ರಮಾನಾಥ ರೈ ಭಾಗವಹಿಸಲಿದ್ದಾರೆ.
ವೇದಿಕೆಯಲ್ಲಿ ಅಲ್ ಫಲಾಹ್ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ಯೂಸುಫ್ ಎಸ್, ಅಮಾಕೋ ಗ್ರೂಪ್ ಆಫ್ ಕಂಪೆನೀಸ್ ಚೆಯರ್ಮ್ಯಾನ್ ಕೆ.ಎಸ್.ಎ.ಆಸಿಫ್ ಅಮಾಕೋ ಉಪಸ್ಥಿತರಿರುವರು.ಯುಎಇ ಯಲ್ಲಿರುವ ಎಲ್ಲಾ ಆತ್ಮೀಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪತ್ರಿಕಾ ಪ್ರಕಟನೆಯಲ್ಲಿ ಕಾರ್ಯಕ್ರಮದ ಸಂಯೋಜಕರು ತಿಳಿಸಿದ್ದಾರೆ.