ಅಂತರಾಷ್ಟ್ರೀಯ

ಬ್ರುಸೆಲ್ಸ್‌ ಬಾಂಬ್ ಸ್ಫೋಟ: ಶಂಕಿತರಿಬ್ಬರ ಫೋಟೋ ಬಿಡುಗಡೆ

Pinterest LinkedIn Tumblr

bruಬ್ರುಸೆಲ್ಸ್‌: ಬ್ರುಸೆಲ್ಸ್‌ ನ ಝವೆಂಟೆಮ್‌ ವಿಮಾನ ನಿಲ್ದಾಣದ ಮೇಲೆ ದಾಳಿಗೈದ ಇಬ್ಬರು ಶಂಕಿತರ ಫೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಈ ಶಂಕಿತರನ್ನು ಬ್ರುಸೆಲ್ಸ್‌ ಪೊಲೀಸರು ನಜೀಂ ಲಾಖೊವಿ ಮತ್ತು ಮೊಹಮ್ಮದ್‌ ಆಬ್ರಿನಿ ಎಂದು ಗುರುತಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಈ ಶಂಕಿತರೇ ಶಾಮೀಲಾಗಿದ್ದರೆಂದು ಹೇಳಲಾಗುತ್ತಿದೆ.

ಝವೆಂಟೆಮ್‌ ವಿಮಾನ ನಿಲ್ದಾಣದಲ್ಲಿ 20 ಮಂದಿ ಮತ್ತು ಮೆಟ್ರೋ ಸ್ಟೇಶನ್‌ನಲ್ಲಿ 14 ಮಂದಿ ಸೇರಿದಂತೆ ಒಟ್ಟು 34 ಮಂದಿ ಈ ಭಯೋತ್ಪಾದಕರ ದಾಳಿಯಲ್ಲಿ ಸಾವನಪ್ಪಿದ್ದಾರೆ.

ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದಿದ್ದ ಉಗ್ರ ದಾಳಿ ಪ್ರಮುಖ ರೂವಾರಿ ಅಬ್ಧೆಸ್ಲಾಮ್‌ ನನ್ನು ಸೆರೆ ಹಿಡಿಯಲಾದ ನಾಲ್ಕೇ ದಿನಗಳ ತರುವಾಯ ಬ್ರುಸೆಲ್ಸ್‌ ಮೇಲೆ ಈ ಭಯೋತ್ಪಾದಕ ದಾಳಿ ಇಂದು ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ನಡೆದಿದೆ.

Write A Comment