ಪಣಜಿ: ಗೋವಾದಲ್ಲಿ ಕ್ಯಾಸಿನೊ ಪ್ರಾರಂಭಿಸಲು ಮದ್ಯ ಉದ್ಯಮಿ ವಿಜಯ ಮಲ್ಯ ಅವರ ಉದ್ಯಮ ಸಾಮ್ರಾಜ್ಯಕ್ಕೆ ಸೇರಿದ ಯುಬಿ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪನಿಯು ಅರ್ಜಿ ಸಲ್ಲಿಸಿದೆ ಎಂದು ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ ಪರ್ಸೇಕರ್ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಕೇಳಿದ್ದ ಲಿಖಿತ ಪ್ರಶ್ನೆಗೆ ಉತ್ತರಿಸುತ್ತ ಇತರ ಐದು ಕಂಪನಿಗಳು ಕೂಡಾ ಗೋವಾ ರಾಜ್ಯದಲ್ಲಿ ಕ್ಯಾಸಿನೊ ಪ್ರಾರಂಭಿಸಲು ಅರ್ಜಿ ಸಲ್ಲಿಸಿವೆ ಎಂದು ತಿಳಿಸಿದ್ದಾರೆ.
ಪರ್ಸೇಕರ್ ಅವರು ಮಲ್ಯ ಸಹಭಾಗಿತ್ವವಿರುವ ಕಂಪನಿ ಅರ್ಜಿಯ ಸ್ಥಿತಿಗತಿ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಗೋವಾದಲ್ಲಿ ಹಲವಾರು ಕ್ಯಾಸಿನೊಗಳಿದ್ದು, ಐಷಾರಾಮಿ ಹೋಟೆಲ್ಗಳು, ಬೀಚ್ ರೆಸಾರ್ಟ್ಗಳಿಗೂ ಕಡಿಮೆಯೇನಿಲ್ಲ.