ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಚಕ್ರವ್ಯೂಹ ಸಿನಿಮಾದ ಹಾಡು ಯ್ಯೂಟೂಬ್‍ನಲ್ಲಿ ಸಖತ್ ಕ್ಲಿಕ್ ಆಗಿದೆ.
‘ಗೆಳೆಯ ಗೆಳೆಯ’ ಹಾಡು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆದ 24 ಗಂಟೆಯಲ್ಲಿ 1 ಲಕ್ಷ ಹಿಟ್ಸ್ ಪಡೆದಿದ್ದು ಸ್ಯಾಂಡಲ್‍ವುಡ್‍ನಲ್ಲಿ ಹೆಚ್ಚು ಹಿಟ್ಸ್ ಪಡೆದ ಹಾಡುಗಳ ಪಟ್ಟಿ ಸೇರಿದೆ. ಟಾಲಿವುಡ್‍ನ ಖ್ಯಾತನಟ ಜೂನಿಯರ್ ಎನ್‍ಟಿಆರ್ ಈ ಹಾಡಿಗೆ ಕಂಠದಾನ ಮಾಡಿದ್ದು ಸಂಗೀತ ನಿರ್ದೇಶಕ ತಮನ್ ಟ್ಯೂನ್ ಕಂಪೋಸ್ ಮಾಡಿದ್ದಾರೆ. ಶರವಣ ಸಾರಥ್ಯದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುವ ಸಿನಿಮಾ ಸಿನಿರಸಿಕರಲ್ಲಿ ಕುತೂಹಲ ಹೆಚ್ಚಿಸುತ್ತಿದೆ.
ರಚಿತಾ ರಾಮ್ ನಾಯಕಿಯಾಗಿದ್ದು, ತಮಿಳು ನಟ ಅರುಣ್ ವಿಜಯ್ ಮುಖ್ಯಪಾತ್ರವೊಂದರಲ್ಲಿ ನಟಿಸಿದ್ದಾರೆ. ಎಸ್‍ಎಸ್ ತಮನ್ ಸಂಗೀತ ನಿರ್ದೇಶನ ಮಾಡಿದ್ದು ಶಣ್ಮುಗಂ ಸುಂದರಂ ಅವರ ಛಾಯಾಗ್ರಾಹನ ಚಕ್ರವ್ಯೂಹ ಸಿನಿಮಾಕ್ಕಿದೆ.