ರಾಷ್ಟ್ರೀಯ

ಬಸ್‍ ನಲ್ಲಿ ಮಹಿಳೆ ಮೇಲೆ ಚಾಲಕ ಮತ್ತು ಕಂಡಕ್ಟರ್ ಸೇರಿ ಅತ್ಯಾಚಾರ ! ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಮಡಿಲಿನಿಂದ ಕೆಳಗೆ ಬಿದ್ದು ಮಗು ಸಾವು

Pinterest LinkedIn Tumblr

Gangrape2

ಲಕ್ನೋ: ಮಹಿಳೆಯೊಬ್ಬರು ಬಸ್‍ನಲ್ಲಿ ಹೋಗುವ ವೇಳೆ ಚಾಲಕ ಮತ್ತು ಕಂಡಕ್ಟರ್ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಈ ವೇಳೆ ಮಹಿಳೆ ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆಕೆಯ ಮಗು ಕೆಳಗೆ ಬಿದ್ದು ಸಾವನ್ನಪ್ಪಿದೆ.

ಸೋಮವಾರ ರಾತ್ರಿ ಬರೇಲಿಯಿಂದ 70ಕಿಮೀ ದೂರವಿರುವ ರಮ್‍ಪುರ್‍ಗೆ ಇಬ್ಬರು ಮಕ್ಕಳೊಂದಿಗೆ ಬಸ್‍ನಲ್ಲಿ ಹೊರಟಿದ್ದ 28 ವರ್ಷದ ಮಹಿಳೆಯ ಮೇಲೆ ಈ ಹೇಯ ಕೃತ್ಯ ನಡೆದಿದೆ. ಆಕೆ ಬಸ್ ಹತ್ತಿದ ನಂತರ ನಿದ್ದೆಗೆ ಜಾರಿದ್ದರು. ಅನಂತರ ಆಕೆ ಕಣ್ಣುಬಿಟ್ಟಾಗ ಇತರೆ ಪ್ರಯಾಣಿಕರೆಲ್ಲಾ ಇಳಿದಿದ್ದರು.

ಈ ವೇಳೆ ಮಹಿಳೆ ಮೇಲೆ ಡ್ರೈವರ್ ಮತ್ತು ಕಂಡಕ್ಟರ್ ಅತ್ಯಾಚಾರ ನಡೆಸಿದ್ದು, ಆಕೆಯ ತೊಡೆಯ ಮೇಲೆ ಮಲಗಿದ್ದ ಮಗು ಕೆಳಗೆ ಬಿದ್ದು ಸಾವನ್ನಪ್ಪಿದೆ. ಮಹಿಳೆಯನ್ನು ನಡುರಸ್ತೆಯಲ್ಲಿ ಇಳಿಸಿ ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Write A Comment