ನವದೆಹಲಿ: ದೇಶದ ಪ್ರಸಿದ್ಧ ಹಾಗೂ ಶ್ರೀಮಂತರು ಮಾತ್ರ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ. ಬಡ ಹಾಗೂ ನಿರ್ಗತಿಕರು ತಮ್ಮ ಜೀವನೋಪಾಯದ ಹೋರಾಟದಲ್ಲಿ ಮುಳುಗಿದ್ದಾರೆೆ ಎಂದು ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ಚಾಟಿ ಬೀಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರ ಬ್ಯಾಟಿಂಗ್ ಮಾಡುವ ಖೇರ್ ಶನಿವಾರ ಕೋಲ್ಕತ್ತಾದಲ್ಲಿ ನಡೆದ ಟೆಲಿಗ್ರಾಫ್ ಅಸಹಿಷ್ಣುತೆ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ, ದೇಶದೆಲ್ಲೆಡೆ ಅಸಹಿಷ್ಣುತೆ ಇದ್ದರೆ ಅದರ ಬಗ್ಗೆ ಸಾರ್ವಜನಿಕ ಚರ್ಚೆ ಮಾಡಲಾಗುತ್ತಿತ್ತು ಆದರೆ ಬಿಜೆಪಿ ಪಕ್ಷದ ಜನಪ್ರಿಯತೆ ಸಹಿಸದ ವಿರೋಧ ಪಕ್ಷಗಳು ಅಸಹಿಷ್ಣುತೆ ವಿಷಯದ ಬಗ್ಗೆ ವಿನಾಃ ಕಾಲ ಹರಣ ಮಾಡುತ್ತವೆ ಎಂದರು.
ದಾರಿಹೋಕರಿಗೆ ಅಸಹುಷ್ಣುತೆ ವಿಷಯದ ಕುರಿತು ಕೇಳಿದಾಗ ಅದರ ಅರಿವೇ ಆತನಿಗಿರುವುದಿಲ್ಲ, ಅವರಿಗೆ ತಮ್ಮ ಹೊಟ್ಟೆಪಾಡು ಮುಖ್ಯವಾಗಿರುತ್ತದೆ ಎಂದು ಖೇರ್ ಹೇಳಿದರು.