ಕರ್ನಾಟಕ

ಮಿನಿಸಮರ; ಜಿಲ್ಲಾ ಪಂಚಾಯ್ತಿಯಲ್ಲಿ ಗೆದ್ದ, ಸೋತ ಘಟಾನುಘಟಿಗಳು

Pinterest LinkedIn Tumblr
Bhavani
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಮತ್ತು ಸೋಲನ್ನನುಭವಿಸಿದ ಪ್ರಮುಖರ ವಿವರ ಇಲ್ಲಿದೆ…ಗೆದ್ದ ಪ್ರಮುಖರು:
*ಹಾಸನ ಹಳೇಕೋಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಗೆಲುವು.

*ಮೈಸೂರಿನ ಭೇರ್ಯ ಕ್ಷೇತ್ರದಲ್ಲಿ ಮಾಜಿ ಸಂಸದ ಎಚ್‌.ವಿಶ್ವನಾಥ್‌ ಪುತ್ರ ಅಮಿತ್‌ ದೇವರಹಟ್ಟಿ ಗೆ (ಕಾಂಗ್ರೆಸ್‌) ಗೆಲುವು

*ರಾಮನಾಥಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಶುಸಂಗೋಪನಾ ಸಚಿವ ಎ.ಮಂಜು ಪುತ್ರ, ಜಿಲ್ಲಾ ಯುವ ಕಾಂಗೈ ಅಧ್ಯಕ್ಷ ಡಾ.ಮಂಥರ್ ಗೌಡಗೆ ಜಯ.

*ಹಾಸನದ ಕಂದಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಸನ ಕ್ಷೇತ್ರದ ಶಾಸಕ ಎಚ್ ಎಸ್ ಪ್ರಕಾಶ್ ಅವರ ಪುತ್ರ ಎಚ್ ಪಿ ಸ್ವರೂಪ್ ಗೆ ಗೆಲುವು

*ಡಿ.ಕಾಳೇನಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಶಾಸಕ ಸಿ.ಎನ್‌.ಬಾಲಕೃಷ್ಣ , ಜಯದೇವ ಆಸ್ಪತ್ರೆ ನಿರ್ದೇಶಕ ಡಾ| ಸಿ.ಎನ್‌.ಮಂಜುನಾಥ್‌ ಸಹೋದರ ಸಿ.ಎನ್‌.ಪುಟ್ಟಸ್ವಾಮಿಗೌಡ ಗೆಲುವು

*ಬೆಳಗೋಡು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಸಕಲೇಶಪುರ ಶಾಸಕ ಎಚ್‌.ಕೆ. ಕುಮಾರಸ್ವಾಮಿ  ಪತ್ನಿ ಚಂಚಲಾಗೆ ಗೆಲುವು.

*ಮಿಡಿಗೇಶಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್‌. ರಾಜಣ್ಣ ಅವರ ಪತ್ನಿ ಶಾಂತಲಾ ರಾಜಣ್ಣಗೆ ಗೆಲುವು

*ಮಂಗಳವಾಡ ಕ್ಷೇತ್ರದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ ಅವರ ಪುತ್ರ ಮಾಜಿ ಜಿಪಂ ಸದಸ್ಯ ಹೆಚ್‌.ವಿ. ವೆಂಕಟೇಶ್‌ಗೆ (ಕಾಂಗ್ರೆಸ್‌)ಗೆಲುವು

*ಹುಲಿಯೂರು ದುರ್ಗ ಕ್ಷೇತ್ರದಲ್ಲಿ ಮಾಜಿ ಸಚಿವ ವೈ.ಕೆ. ರಾಮಯ್ಯ ಪತ್ನಿ ಅನುಸೂಯಮ್ಮ (ಕಾಂಗ್ರೆಸ್‌)ಗೆ ಗೆಲುವು

*ಮಂಡಿಕಲ್ಲು ಕ್ಷೇತ್ರದಿಂದ  ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ರವರ ತಂದೆ ಪಿ.ಎನ್‌.ಕೇಶವರೆಡ್ಡಿ ಗೆಲುವು.

*ಪಾರಾಂಡಹಳ್ಳಿ ಕ್ಷೇತ್ರದಲ್ಲಿ ಕೆಜಿಎಫ್ ಶಾಸಕಿ ವೈ.ರಾಮಕ್ಕ ಅವರ ಮೊಮ್ಮಗಳು, ಮಾಜಿ ಶಾಸಕ ಸಂಪಂಗಿ ಅವರ ಮಗಳು ಅಶ್ವಿ‌ನಿ ಸಂಪಂಗಿಗೆ ಗೆಲುವು.

*ಬಳ್ಳಾರಿಯ ರೂಪನಗುಡು ಕ್ಷೇತ್ರದ ಕಾಂಗ್ರೆಸ್‌ ಹಿರಿಯ ಮುಖಂಡ ಅಲ್ಲಂ ವೀರಭದ್ರಪ್ಪ ಅವರ ಮಗ ಅಲ್ಲಂ ಪ್ರಶಾಂತ್‌ಗೆ ಗೆಲುವು

ಸೋತ ಪ್ರಮುಖರು:

*ದಕ್ಷಿಣ ಕನ್ನಡದ ಸಜೀಪ ಮೂನ್ನೂರು ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಪದ್ಮನಾಭ ಕೊಟಾರಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಚಂದ್ರ ಪ್ರಕಾಶ್‌ ಶೆಟ್ಟಿ ಎದುರು 2172 ಮತಗಳಿಂದ ಸೋತಿದ್ದಾರೆ.

*ಚಾಮರಾಜನಗರದ ಬರಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹವ್ಯಾಸಿ ಪತ್ರಕರ್ತ ಮನು
ಶಾನುಭೋಗ್‌ಗೆ ಸೋಲು. (ಇವರು ಶಿಕ್ಷಣ ಇಲಾಖೆಯಲ್ಲಿನ ಗುಮಾಸ್ತ ಕೆಲಸಕ್ಕೆ ರಾಜೀನಾಮೆ ನೀಡಿ, ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕೋರ್ಟ್‌ ಆದೇಶ ಪಡೆದು ಸ್ಪರ್ಧಿಸಿದ್ದರು)

*ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಪತ್ನಿ ಲಲಿತಾ ಕೆ.ದೇವೇಗೌಡಗೆ‌ (ಜೆಡಿಎಸ್‌ ಸ್ಪರ್ಧಿ) ಸೋಲು

*ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೆಂಕಟೇಶ್‌ ಪುತ್ರ ನಿತಿನ್‌ ವೆಂಕಟೇಶ್‌ಗೆ 8 ಮತಗಳಿಂದ ಸೋಲು

*ಬಾಗೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಸಕ ಸಿ.ಎನ್‌.ಬಾಲಕೃಷ್ಣ ಅವರ ಪತ್ನಿ ಕುಸುಮಾರಾಣಿಗೆ ಸೋಲು

*ನಿಟ್ಟೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರ ಪತ್ನಿ ಭಾರತಿ ಶ್ರೀನಿವಾಸ್‌ ಅವರಿಗೆ ಹೀನಾಯ ಸೋಲು

*ಉಡುಪಿಯ ಪೆರ್ಡೂರು ಜಿ.ಪಂ ಕ್ಷೇತ್ರದಲ್ಲಿ ಮಾಜಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಬಿ.ಎನ್‌.ಶಂಕರ್‌ ಪೂಜಾರಿ ಅವರಿಗೆ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ದ ಸೋಲು.
-ಉದಯವಾಣಿ

Write A Comment