
ಬೆಂಗಳೂರು: ನಟ ಕಿಚ್ಚ ಸುದೀಪ್ ಹಾಪ್‍ಕಾಮ್ಸ್‍ಗೆ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಸುದೀಪ್ ಹಾಪ್‍ಕಾಮ್ಸ್‍ನ ರಾಯಭಾರಿ ಆಗುತ್ತಿರುವ ಬಗ್ಗೆ ಹಾಪ್ ಕಾಮ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ ಕೃಷ್ಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮುಂದಿನ ದಿನದಲ್ಲಿ ರೈತರ ಪರ ಹಾಪ್ ಕಾಮ್ಸ್ ಪ್ರಮೋಷನ್ ಕಾರ್ಯದಲ್ಲಿ ಸುದೀಪ್ ಭಾಗಿಯಾಗಲಿದ್ದಾರೆ. ಇದಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆಯದೇ ಬ್ರಾಂಡ್ ಅಂಬಾಸಿಡರ್ ಆಗಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕೆಎಂಎಫ್ ಉತ್ಪನ್ನಗಳಿಗೆ ನಟಿ ರಾಗಿಣಿ ಮತ್ತು ನಟ ಪುನೀತ್‍ರಾಜ್‍ಕುಮಾರ್ ಸಂಭಾವನೇ ಪಡೆಯದೇ ರಾಯಭಾರಿಗಳಾಗಿ ಜಾಹಿರಾತುಗಳಲ್ಲಿ ಕಾಣಿಸಿಕಂಡಿದ್ದರು. ಅಲ್ಲದೆ ಹೊಸ ಬೆಳಕು ಎಲ್‍ಇಡಿ ಬಲ್ಬ್ ಯೋಜನೆಗೆ ಮೋಹಕ ತಾರೆ ರಮ್ಯಾ ಮತ್ತು ಪುನೀತ್ ರಾಜ್‍ಕುಮಾರ್ ರಾಯಭಾರಿಯಾಗಿದ್ದಾರೆ.