ಕನ್ನಡ ವಾರ್ತೆಗಳು

ಉಡುಪಿಯಲ್ಲಿ ಗೆಲುವಿನ ನಗೆ ಬೀರಿದ ಕಮಲ- ಸೋತು ಸುಣ್ಣವಾದ ಕಾಂಗ್ರೆಸ್; ಉಡುಪಿ ಜಿಲ್ಲಾ ಪಂಚಾಯತ್ ಬಿಜೆಪಿ ತೆಕ್ಕೆಗೆ; ಬಿಜೆಪಿ- 20 ಕಾಂಗ್ರೆಸ್- 6 (updated)

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಮತ ಎಣಿಕೆ ಆರಂಭವಾಗಿ ಒಂದೂವರೆ ಗಂಟೆ ಕಳೆಯುತ್ತಿದ್ದು ಈಗಾಗಲೇ ಬಿಜೆಪಿ ಮುಂಚೂಣಿಯಲ್ಲಿದೆ ಎನ್ನಲಾಗಿದೆ. ಉಡುಪಿ ಹಾಗೂ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು ಬೈಂದೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಬಿಜೆಪಿ ತೆಕ್ಕೆಗೆ ಬಿಜೆಪಿ- 20 ಕಾಂಗ್ರೆಸ್- 6 ಸೀಟು ಪಡೆದಿದ್ದು ಕಾಂಗ್ರೆಸ್ ಸೋಲಿನ ಪರಾಮರ್ಷೆಯಲ್ಲಿದೆ.

updated news:

ಉಡುಪಿ ಜಿಲ್ಲಾ ಪಂಚಾಯತ್ ಬಿಜೆಪಿ ತೆಕ್ಕೆಗೆ ಬಿಜೆಪಿ- 20 ಕಾಂಗ್ರೆಸ್- 6

ಗೆದ್ದವರ ಹೆಸರು ಮತ್ತು ಪಕ್ಷ : ಪೆರ್ಡೂರು- ಕಾಂಗ್ರೆಸ್- ಸುಧಾಕರ್ ಶೆಟ್ಟಿ, ಬ್ರಹ್ಮಾವರ- ಬಿಜೆಪಿ- ಶೀಲಾ ಶೆಟ್ಟಿ, ಉದ್ಯಾವರ- ಬಿಜೆಪಿ- ದಿನಕರ್, ಹಿರಿಯಡ್ಕ- ಕಾಂಗ್ರೆಸ್- ಚಂದ್ರಿಕಾ, ಕುರ್ಕಾಲು- ಬಿಜೆಪಿ- ಗೀತಾಂಜಲಿ ,ಶಿರ್ವ- ಕಾಂಗ್ರೆಸ್- ವಿಲ್ಸನ್, ಎಲ್ಲೂರು- ಬಿಜೆಪಿ- ಶಿಲ್ಪಾ, ಪಡುಬಿದ್ರೆ- ಬಿಜೆಪಿ- ಶಶಿಕಾಂತ್, ಹೆಬ್ರಿ- ಬಿಜೆಪಿ- ಜ್ಯೋತಿ, ಬೆಳ್ಮಣ್ಣು- ಬಿಜೆಪಿ- ರೇಷ್ಮಾ, ಬೈಲೂರು- ಬಿಜೆಪಿ- ಸುಮಿತ್, ಮೀಯಾರು- ಬಿಜೆಪಿ- ದಿವ್ಯ, ಬಜಗೋಳಿ- ಬಿಜೆಪಿ- ಉದಯ ಕೋಟ್ಯಾನ್, ಕೋಟ- ಬಿಜೆಪಿ- ರಾಘವೇಂದ್ರ ಕಾಂಚನ್, ಮಂದರ್ತಿ- ಬಿಜೆಪಿ- ಪ್ರತಾಪ್ ಹೆಗ್ಡೆ, ಕಾವ್ರಾಡಿ- ಕಾಂಗ್ರೆಸ್- ಜ್ಯೋತಿ, ಕಲ್ಯಾಣಪುರ- ಕಾಂಗ್ರೆಸ್- ಜನಾರ್ದನ ತೋನ್ಸೆ, ಶೀರೂರು- ಬಿಜೆಪಿ- ಸುರೇಶ್, ಬೈಂದೂರು- ಬಿಜೆಪಿ- ಶಂಕರ ಪೂಜಾರಿ, ಕಂಬದಕೋಣೆ- ಕಾಂಗ್ರೆಸ್- ಗೌರಿ, ತ್ರಾಸಿ- ಬಿಜೆಪಿ- ಶೋಭಾ, ವಂಡ್ಸೆ- ಬಿಜೆಪಿ- ಬಾಬು ಶೆಟ್ಟಿ, ಕೋಟೇಶ್ವರ- ಬಿಜೆಪಿ- ಲಕ್ಷ್ಮೀ, ಬೀಜಾಡಿ- ಬಿಜೆಪಿ- ಲತಾ, ಸಿದ್ದಾಪುರ- ಬಿಜೆಪಿ- ತಾರಾನಾಥ ಶೆಟ್ಟಿ, ಹಾಲಾಡಿ- ಬಿಜೆಪಿ- ಸುಪ್ರೀತಾ.

ಕುಂದಾಪುರದ ಸಿದ್ದಾಪುರ, ಹಾಲಾಡಿ, ಶಿರೂರು ಹಾಗೂ ವಂಡ್ಸೆಯಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು ಪ್ರತಿಷ್ಟೆಯ ಕಣವಾಗಿರುವ ಬೈಂದೂರು, ಖಂಬದಕೋಣೆ ಹಾಗೂ ಕಾವ್ರಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಉಡುಪಿಯಲ್ಲಿ ಒಟ್ಟು 18  ಬಿಜೆಪಿ ಹಾಗೂ 8 ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. (9.40am)

Voting_News_Udp (7) Voting_News_Udp (15) Voting_News_Udp (13) Voting_News_Udp (14) Voting_News_Udp (16) Voting_News_Udp (12) Voting_News_Udp (11) Voting_News_Udp (10) Voting_News_Udp (9) Voting_News_Udp (8) Voting_News_Udp (3) Voting_News_Udp (4) Voting_News_Udp (5) Voting_News_Udp (2) Voting_News_Udp (17) Voting_News_Udp (18) Voting_News_Udp (19) Voting_News_Udp (1)

ಮಧ್ಯಾಹ್ನ 11 ಗಂಟೆ ಅಪ್ಡೇಟ್:
ಹಾಲಾಡಿ, ಕೋಟ, ಸಿದ್ದಾಪುರ, ಕೋಟೇಶ್ವರ, ಮಂದರ್ತಿ, ಬೀಜಾಡಿ ಜಿಲ್ಲಾಪಂಚಾಯತ್ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು ಬಹುಏತಕ ವಿಜಯದ ಗುರಿಯಲ್ಲಿದ್ದಾರೆ. ಖಂಬದಕೋಣೆಯಲ್ಲಿ ಕಾಂಗ್ರೆಸ್ ಸಾವಿರಕ್ಕೂ ಅಧಿಕ ಮತಗಳ ಮುನ್ನಡೆಯಲ್ಲಿದೆ. ಇನ್ನು ಬೈಂದೂರು ಹಾಗೂ ಕಾವ್ರಾಡಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

ಬಿಜೆಪಿ ವಿಜಯೋತ್ಸವ:
ಕುಂದಾಪುರ ತಾಲೂಕಿನ ಹಲವೆಡೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿರುವ ಹಿನ್ನೆಲೆ ಜಿಲ್ಲಾದ್ಯಂತ ಬಿಜೆಪಿ ಸಂಭ್ರವನ್ನು ಆಚರಿಸುತ್ತಿದೆ. ಕಾರ್ಯಕರ್ತರು ಅಲ್ಲಲ್ಲಿ ಹಾರತುರಾಯಿಗಳನ್ನು ಹಾಕಿ ಗೆದ್ದ ಅಭ್ಯರ್ಥಿಗಳನ್ನು ಬರಮಾಡಿಕೊಳ್ಳುತ್ತಿದ್ದಾರೆ.

Write A Comment