ಮಂಗಳೂರು :ದ.ಕ. ಜಿಪಂ ಮತ್ತು ತಾಪಂಗಳಿಗೆ ಶನಿವಾರ ನಡೆದ ಚುನಾವಣೆಯ ಮತ ಏಣಿಕೆ ಕಾರ್ಯ ಪೂರ್ಣಗೊಂಡಿದ್ದು, ದ.ಕ.ಜಿಲ್ಲಾ ಪಂಚಾಯತ್‌ನ ಫಲಿತಾಂಶ ಹೊರಬಿದ್ದಿದೆ. ದ.ಕ. ಜಿಲ್ಲಾ ಪಂಚಾಯತ್ ಕ್ಷೇತ್ರ 36 ರಲ್ಲಿ ಬಿಜೆಪಿಯ 21 ಕ್ಷೇತ್ರಗಳ ಅಭ್ಯರ್ಥಿಗಳು ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದೆ. ಕಾಂಗ್ರೆಸ್ 16 ಸ್ಥಾನ ಮಾತ್ರ ಪಡೆಯುವಲ್ಲಿ ಸಫಲವಾಗಿದೆ.
ಒಂದು ಸ್ಥಾನದ ಅಂತರದಲ್ಲಿ ತಾಲೂಕು ಪಂಚಾಯತ್ ಚುಕ್ಕಾಣಿ ಹಿಡಿದ ಕಾಂಗ್ರೆಸ್
ಮಂಗಳೂರು : ಮಂಗಳೂರು ತಾಲೂಕು ಪಂಚಾಯತ್ ಚುನಾವಣೆಯ ಮತ ಏಣಿಕೆ ಕಾರ್ಯ ಪೂರ್ಣಗೊಂಡಿದ್ದು, ಜಿದ್ದಾಜಿದ್ಧಿನ ಈ ಹೋರಾಟದಲ್ಲಿ ಒಂದು ಸ್ಥಾನದ ಅಂತರದಲ್ಲಿ ಕಾಂಗ್ರೆಸ್ ಪಕ್ಷ ತಾಲೂಕು ಪಂಚಾಯತ್ ಚುಕ್ಕಣಿ ಹಿಡಿದಿದೆ.
ಒಟ್ಟು 39 ಕ್ಷೇತ್ರಗಳಿಗೆ ನಡೆದ ತಾಲೂಕು ಪಂಚಾಯತ್ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆಯೇರಿದೆ. ಆದರೆ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಒಂದು ಸ್ಥಾನದ ಕೊರತೆಯಿಂದ ಸೋಲುಂಡಿದೆ.
ಹೆಚ್ಚಿನ ವಿವರ ನಿರೀಕ್ಷಿಸಿ…