ಉಳ್ಳಾಲ,ಫೆ.23: ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ವತಿಯಿಂದ ಭಯೋತ್ಪಾದನೆ ವಿರುದ್ಧ ಜಿಹಾದ್ ಆಂದೋಲನದ ಭಾಗವಾಗಿ ಎಸ್ ಬಿ ಎಸ್ ಉಳ್ಳಾಲ ಝೋನ್ ವಿದ್ಯಾರ್ಥಿಗಳಿಂದ ಬ್ರಹತ್ ಸೈಕಲ್ ಮ್ಯಾರಾಥಾನ್ ಉಳ್ಳಾಲ ಸೆಕ್ಟರ್ ಕಾರ್ಯದರ್ಶಿ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಯೂಸುಫ್ ಮುಸ್ಲಿಯಾರ್ ದುವಾ ಮಾಡಿದರು.ಆರ್ ಕೆ ಮದನಿ ಅಮ್ಮೆಂಬಳ ಕಾರ್ಯಕ್ರಮ ಉದ್ಘಾಟಿಸಿದರು.ಮುನೀರ್ ಸಖಾಫಿ ಉಳ್ಳಾಲ ಸಂದೇಶ ಭಾಷಣ ಮಾಡಿದರು.ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿ ಮುಸ್ತಫ ಮಾಸ್ಟರ್ ಉಳ್ಳಾಲ ವಂದಿಸಿದರು.
ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಅಸ್ಲಂ ಅಕ್ಕರೆಕೆರೆ,ಫಾರೂಖ್ ಹಿಬಃ,ತಾಜುದ್ದೀನ್ ಹಳೆಕೋಟೆ,ನಿಝಾಮುದ್ದೀನ್ ಕೋಟೆಪುರ,ಸತ್ತಾರ್ ಮೇಲಂಗಡಿ ಉಪಸ್ಥಿತರಿದ್ದರು