ಅಂತರಾಷ್ಟ್ರೀಯ

ತಲೆಗೂದಲಿನಿಂದ ಸ್ವೆಟರ್ ಹೆಣೆದ ವೃದ್ಧೆ

Pinterest LinkedIn Tumblr

romanian-hair

ರೊಮಾನಿಯಾ: ಉಲ್ಲನ್ ದಾರದಿಂದ ಸ್ವೆಟರ್ ಹೆಣೆಯೋದು ಸಾಮಾನ್ಯ. ಅಥವಾ ಕುರಿಯ ಉಣ್ಣೆಯಿಂದ, ಪ್ರಾಣಿಗಳ ಚರ್ಮದಿಂದ ಕೋಟ್ ತಯಾರಿಸೋದನ್ನೂ ಕೇಳಿರ್ತೀರಿ. ಆದ್ರೆ ವಿದೇಶದಲ್ಲಿ ವೃದ್ಧೆಯೊಬ್ಬರು ತಮ್ಮ ತಲೆಗೂದಲಿನಿಂದಲೇ ಸ್ವೆಟರ್ ಹೆಣೆದಿದ್ದಾರೆ.

ರೊಮಾನಿಯಾದ ಸ್ಟಾಸೆನಿ ಎಂಬ ಪುಟ್ಟ ಹಳ್ಳಿಯ ನಿವಾಸಿ ಒರ್ಟಾನ್ಸಾ(65) 20 ವರ್ಷಗಳಿಂದ ತಮ್ಮ ತಲೆಗೂದಲನ್ನ ಕೂಡಿಟ್ಟು ಅದರಿಂದ ಒಂದು ಸ್ವೆಟರ್ ಹೆಣೆದಿದ್ದಾರೆ. ಇವರು ವಾಸವಾಗಿರೋ ಹಳ್ಳಿಯ ಸಂಪ್ರದಾಯದ ಪ್ರಕಾರ ಮಹಿಳೆಯರು ತಲೆ ಬಾಚಿದ ನಂತರ ಕೂದಲನ್ನ ಹೊರಗಡೆ ಎಸೆಯುವಂತಿಲ್ಲ. ಒಂದು ವೇಳೆ ಎಸೆದರೆ ಅವರು ತಮ್ಮ ಸೌಂದರ್ಯವನ್ನೇ ಎಸೆದಂತೆ ಅನ್ನೋ ನಂಬಿಕೆಯಿದೆ.

ಈ ನಿಯಮವನ್ನ ಪಾಲಿಸಿಕೊಡು ಬಂದಿರೋ ಒರ್ಟಾನ್ಸಾ ಒಂದು ಚೀಲದಲ್ಲಿ ಕೂದಲನ್ನ ಶೇಖರಿಸಿ ಇಡುತ್ತಿದ್ದರು. ಆದರೆ ಕೂದಲನ್ನ ಇಟ್ಕೊಂಡು ಏನ್ ಮಾಡೊದು ಅಂತ ಯೋಚಿಸುತ್ತಿದ್ದ ವರು ಕೊನೆಗೆ ಕೂದಲಿನಿಂದ ಒಂದು ಸ್ವೆಟರ್ ಹೆಣೆದೇ ಬಿಟ್ರು.

ಒರ್ಟಾನ್ಸಾ ತಮ್ಮ 40ನೇ ವಯಸ್ಸಿನಿಂದ ಕೂದಲನ್ನು ಶೇಖರಿಸೋಕೆ ಶುರುಮಾಡಿ 20 ವರ್ಷದ ನಂತರ 1 ಕೆಜಿ ಕೂದಲು ಸಂಗ್ರಹಿಸಿದ್ರು. ಅವರಿಗೆ ತುಂಬಾ ಉದ್ದವಾದ ಕೂದಲಿದ್ದಿದ್ದರಿಂದ ಸ್ವೆಟರ್ ಹೆಣೆಯೋಕೆ ಉದ್ದವಾದ ಕೂದಲ ಎಳೆಗಳು ಉಪಯೋಗವಾದವು. ಒರ್ಟಾನ್ಸಾ ಅವರಿಗೆ ಸ್ವೆಟರ್ ಹೆಣೆಯೋಕೆ ಒಂದು ವಾರ ಬೇಕಾಯಿತು. 5 ವರ್ಷಗಳ ಕಾಲ ಒರ್ಟಾನ್ಸಾ ಅವರು ಈ ಕೂದಲ ಸ್ವೆಟರ್ ಬಳಸಿದ ನಂತರ ಅದನ್ನೀಗ ರೊಮಾನಿಯಾದ ಮ್ಯೂಸಿಯಮ್ ಒಂದರಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

Write A Comment