ಕನ್ನಡ ವಾರ್ತೆಗಳು

ಅಶಾಂತಿಗೆ ಇಸ್ಲಾಂ ಪ್ರೋತ್ಸಾಹ ನೀಡುವುದಿಲ್ಲ: ಇಬ್ರಾಹಿಂ ಕೋಡಿಜಾಲ್

Pinterest LinkedIn Tumblr

Konaje_Jata_1

ಉಳ್ಳಾಲ,ಫೆ.22 : ಇಸ್ಲಾಂ ಎಂದರೆ ಶಾಂತಿಯಂದರ್ಥ. ಅಶಾಂತಿಗೆ ಇಸ್ಲಾಂ ಪ್ರೋತ್ಸಾಹ ನೀಡುವುದಿಲ್ಲ. ಶಾಂತಿ ಸೌಹಾರ್ದತೆಯಿಂದ ಬದುಕು ನಮ್ಮದಾಗಬೇಕು ಎಂದು ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.

ಅವರು ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ವತಿಯಿಂದ ಭಯೋತ್ಪಾದನೆ ವಿರುದ್ಧ ಜಿಹಾದ್ ಜನಾಂದೋಲನ ಕಾಲ್ನಾಡಿಗೆ ಜಾಥಾದ ಧ್ವಜ ಹಸ್ತಾಂತರ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಯೋತ್ಪಾದನೆ, ಉಗ್ರವಾದ ಇಸ್ಲಾಂ ವಿರೋಧಿ ಚಟುವಟಿಕೆಯಾಗಿದೆ. ಭಯೋತ್ಪಾದನೆಯನ್ನು ಎಲ್ಲಿಯೋ ಕಲಿಸಿಕೊಡಲಾಗುವುದಿಲ್ಲ. ಆದರೆ ನಿರ್ದಿಷ್ಟ ಸಂಘಟನೆಗಳು ಮುಸ್ಲಿಮರನ್ನು ಭಯೋತ್ಪಾದಕರ ದೃಷ್ಟಿಯಲ್ಲಿ ನೊಡುತ್ತಿರುವುದು ಖೇದಕೆ ಎಂದರು. ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.ದ.ಕ ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಂದೇಶ ಭಾಷಣ ಮಾಡಿದರು.

Konaje_Jata_2 Konaje_Jata_3 Konaje_Jata_4 Konaje_Jata_5 Konaje_Jata_6 Konaje_Jata_7 Konaje_Jata_8 Konaje_Jata_9 Konaje_Jata_10 Konaje_Jata_11

ಮಾಜಿ. ತಾ.ಪಂ ಸದಸ್ಯ ಮುಹಮ್ಮದ್ ಮುಸ್ತಫ ಮಲಾರ್, ಎಸ್ಸೆಸ್ಸೆಫ್ ಕೊಣಜೆ ಸೆಕ್ಟರ್ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮದನಿ, ಸುನ್ನಿ ಸಂಯುಕ್ತ ಜಮಾ‌ಅತ್ ಅಧ್ಯಕ್ಷ ಬಿ. ಖಾಲಿದ್, ಎಸ್.ಎಂ.ಎ ದೇರಳಕಟ್ಟೆ ಶಾಖಾಧ್ಯಕ್ಷ ಅಬ್ದುರ್ರಝಾಕ್ ಹಾಜಿ ಅಜ್ಮೀರ್, ಎಸ್‌ವೈ‌ಎಸ್ ಹರೇಕಳ ಶಾಖಾಧ್ಯಕ್ಷ ಅಬ್ದುರ್ರಝಾಕ್ ಅಲಡ್ಕ, ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಕ್ಯಾಪಸ್ ಪ್ರ.ಕಾರ್ಯದರ್ಶಿ ಅನ್ಸಾರ್ ಮಾಸ್ಟರ್, ಕೆ.ಸಿ.ಫ್ ಕಾರ್ಯಕರ್ತರಾದ ಪಾರೂಕ್ ಸ‌ಅದಿ, ಇಕ್ಬಾಲ್ ಮದನಿ, ಎಸ್ಸೆಸ್ಸೆಫ್ ಹರೇಕಳ ಪ್ರ.ಕಾರ್ಯದರ್ಶಿ ಕಾಸಿಂ ಬೈತಾರ್, ಎಸ್‌ವೈ‌ಎಸ್ ಪಜೀರ್ ಶಾಖಾಧ್ಯಕ್ಷ ಬಶೀರ್, ಜಲೀಲ್, ಎ.ಪಿ ಹನೀಫ್, ಫೈಝಲ್, ರವೂಫ್ ಮುಂತಾದವರು ಈ ಸಂಧರ್ಭ ಉಪಸ್ಥಿತರಿದರು.

ಎಸ್ಸೆಸ್ಸೆಫ್ ಕೊಣಾಜೆ ಸಕ್ಟರ್ ಕೋಶಾಧಿಕಾರಿ ಹೈದರ್ ಅಲಿ ಹಿಮಮಿ ಸ್ವಾಗತಿದರು. ಎಸ್ಸೆಸ್ಸೆಫ್ ಕೊಣಾಜೆ ಸೆಕ್ಟರ್ ಪ್ರ.ಕಾರ್ಯದರ್ಶಿ ಅಶ್ರಫ್ ಪಿ.ಎಚ್ ವಂದಿಸಿದರು.

Write A Comment