ಕನ್ನಡ ವಾರ್ತೆಗಳು

ಉಚ್ಚಿಲ : ಖಾಝಿ ಫಝಲ್ ಕೋಯಮ್ಮ ತಂಙಳ್‌ರಿಂದ ಉರೂಸ್ ಸಮಾರಂಭ ಉದ್ಘಾಟನೆ

Pinterest LinkedIn Tumblr

Uchila_uroos_photo_1

ಉಳ್ಳಾಲ,ಫೆ.19 : ಧರ್ಮದ ಮೇಲೆ ಪರಿಪೂರ್ಣ ವಿಶ್ವಾಸ ಇಟ್ಟುಕೊಂಡರೆ ಮಾತ್ರ ಪರಲೋಕದಲ್ಲಿ ರಕ್ಷಣೆ ಸಾಧ್ಯ. ವ್ಯಾಪಾರ, ಹಣ ಸಂಪಾದಣೆ, ವ್ಯವಹಾರ ಇಹಲೋಕಕ್ಕೆ ಮಾತ್ರ ಸೀಮಿತವಾಗಿದೆ ಹೊರತು ಪರಲೋಕಕ್ಕೆ ಅಲ್ಲ. ಶಾಂತಿ ಸೌಹಾರ್ದತೆಯಿಂದ ಇದ್ದುಕೊಂಡು ಇಸ್ಲಾಂ ಬೋಧಿಸಿದ ಮಾರ್ಗವನ್ನು ಅನುಕರಣೆ ಮಾಡಿ ಅಲ್ಲಾಹನಲ್ಲಿ ವಿಶ್ವಾಸ ಇಟ್ಟುಕೊಂಡಲ್ಲಿ ರಕ್ಷಣೆ ಸಿಗಬಹುದು ಎಂದು ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಹೇಳಿದರು.

ಅವರು ಉಚ್ಚಿಲದಲ್ಲಿ ಅಸ್ಸಯ್ಯಿದ್ ಶರೀಫ್ ಅಲ್ ಅರಬ್ಬಿ ವಲಿಯುಲ್ಲಾಹಿಯವರ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

Uchila_uroos_photo_2 Uchila_uroos_photo_3 Uchila_uroos_photo_4 Uchila_uroos_photo_5

ಸ್ವರ್ಗಕ್ಕೆ ಹೋಗಲು ಪರಿಶ್ರಮ ಬಹಳಷ್ಟು ಪಡೆಯಬೇಕು. ನರಕಕ್ಕೆ ಹೋಗಲು ಪರಿಶ್ರಮ ಬೇಡ. ಧಾರ್ಮಿಕ ಕ್ಷೇತ್ರದಲ್ಲಿ ಸಿಗುವ ವಿವಿಧ ಬಿರುದುಗಳು, ಎಸ್‌ಎಸ್‌ಎಫ್, ಎಸ್‌ಕೆ ಎಸ್‌ಎಸ್‌ಎಫ್, ವಿವಿಧ ಸಂಘಟನೆಗಳು ಇಹಲೋಕಕ್ಕೆ ಮಾತ್ರ ಸೀಮಿತ. ಪರಲೋಕದ ರಕ್ಷಣೆಗೆ ಈ ಸಂಘಟನೆ ನೆರವಿಗೆ ಬರುವುದಿಲ್ಲ ಎಂದರು.

ಮಾತಿನಲ್ಲಿ ಜಾಗ್ರತೆ ವಹಿಸಬೇಕು. ಮಾತು ತಪ್ಪಿದರೆ ಶಾಂತಿ ಹದಗೆಟ್ಟು ಹೋಗಬಹುದು. ಮಾತಿನಿಂದ ರಕ್ಷಣೆ ಸಿಗದವರು ಇದ್ದಾರೆ. ಶಿಕ್ಷೆ ಅನುಭವಿಸಿದವರು ಇದ್ದಾರೆ. ತಪ್ಪು ಮಾಡಿದರೆ ಶಿಕ್ಷೆ ಕಠಿಣವಾಗಿರುತ್ತದೆ ಎಂದರು.

ಉಚ್ಚಿಲ ಮದ್ರಸದ ಸದ್‌ರ್ ಮು‌ಅಲ್ಲಿಂ ಅಕ್ಬರ್ ಅಲಿ ಕಿರಾ‌ಅತ್ ಪಠಿಸಿದರು. ಉಚ್ಚಿಲ ಮಸೀದಿಯ ಅಧ್ಯಕ್ಷ ಯು.ಬಿ. ಮುಹಮ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಬೂ ಸುಫಿಯಾನ್ ಮದನಿ ಮುಖ್ಯ ಭಾಷಣ ಮಾಡಿದರು.

ವೇದಿಕೆಯಲ್ಲಿ ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ, ದರ್ಗಾ ಅಧ್ಯಕ್ಷ ಯು.ಎಸ್. ಹಂಜ, ಉಚ್ಚಿಲ ಮಸೀದಿಯ ಉಪಾಧ್ಯಕ್ಷರಾದ ಅಬ್ಬಾಸ್ ಹಾಜಿ, ಅಬ್ದುಲ್ ಸಲಾಂ, ಸಿ‌ಎಂ.ಮಜೀದ್ ಹಾಜಿ, ಬೀರಿ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್, ಮಾಡೂರು ಜುಮಾ ಮಸೀದಿಯ ಅಧ್ಯಕ್ಷ ಕೆ. ಅಬ್ದುಲ್ಲ ಕೊಂಡಾಣ, ಅಜ್ಜಿನಡ್ಕ ಮಸೀದಿಯ ಅಧ್ಯಕ್ಷ ಅಹ್ಮದ್ ಅಜ್ಜಿನಡ್ಕ, ಕೆಸಿರೋಡ್ ಮಸೀದಿ ಅಧ್ಯಕ್ಷ ಎ.ಎಂ. ಅಬ್ಬಾಸ್ ಹಾಜಿ, ತಲಪಾಡಿ ಜುಮಾ ಮಸೀದಿ‌ಅಧ್ಯಕ್ಷ ಸೀದಿಯಬ್ಬ , ಕೆ.ಸಿ.ನಗರ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಪಂಜಳ ಬಿಜೆ‌ಎಂ ಉಪಾಧ್ಯಕ್ಷ ಟಿ.ಕೆ. ಮುಹಮ್ಮದ್ ಸಲೀಂ, ಹಿದಾಯತ್ ನಗರ ಮಸೀದಿ ಅಧ್ಯಕ್ಷ ಉಮರ್ ಮಾಸ್ಟರ್, ಫಲಾಹ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಅಬ್ಬಾಸ್ ಹಾಜಿ ಮಜಲ್, ಉಚ್ಚಿಲ ಮದ್ರಸದ ಅಧ್ಯಕ್ಷ ಎಸ್.ಬಿ. ಹನೀಫ್, ಎಚ್.ಐ‌ಎಂಪಂಬೈಲ್ ಶಾಖೆ ಅಧ್ಯಕ್ಷ ಉಮರ್ ಫಾರೂಕ್, ಎಚ್‌ಐ‌ಎಂ ಕೊಪ್ಪಳ ಶಾಖೆಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಇಬ್ರಾಜಿಂ ಕೋಟೆಪುರ ಮೊದಲಾದವರು ಉಪಸ್ಥಿತರಿದ್ದರು.

ಉಚ್ಚಿಲ ಮಸೀದಿ ಖತೀಬ್ ಪಿಕೆ. ಮಹಮ್ಮದ್ ಮದನಿ ಅತಿಥಿಗಳನ್ನು ಸ್ವಾಗತಿಸಿದರು. ಉಚ್ಚಿಲ ಮಸೀದಿಯ ಕಾರ್ಯದರ್ಶಿ ಯು. ಅಬೂಬಕರ್ ಹಾಜಿ ಧನ್ಯವಾದ ಸಮರ್ಪಿಸಿದರು.

Write A Comment