ಕನ್ನಡ ವಾರ್ತೆಗಳು

ಇಬ್ಬರೇ ವ್ಯಕ್ತಿಗಳು ನಟಿಸಿರುವ ವಿನೂತನ ಶೈಲಿಯ ಕನ್ನಡ ಚಲನ ಚಿತ್ರ ಯಾಕ್ಟರ್ ನಾಳೆ ತೆರೆಗೆ

Pinterest LinkedIn Tumblr

Actor_Film_Press_1

___ಸತೀಶ್ ಕಾಪಿಕಾಡ್

ಮಂಗಳೂರು: ಸಂಪೂರ್ಣ ಚಿತ್ರದಲ್ಲಿ ಇಬ್ಬರೇ ಇಬ್ಬರು ವ್ಯಕ್ತಿಗಳ ನಟನೆಯ ಮೂಲಕ ಸುಮಾರು 100ನಿಮಿಷದಲ್ಲಿ ವಿನೂತನ ರೀತಿಯಲ್ಲಿ ನಿರ್ಮಿಸಲಾದ ಹೊಸ ಶೈಲಿಯ ಕನ್ನಡ ಚಲನಚಿತ್ರ ಯಾಕ್ಟರ್ ಫೆ.19ರಂದು ತೆರೆಗೆ ಬರಲಿದೆ.

ಮಂಗಳೂರಿನಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಚಿತ್ರದ ನಿರ್ಮಾಪಕ ಕೆ.ಎಂ.ವೀರೇಶ್ ಅವರು, ಪತ್ರಕರ್ತ ಜೀವನದಲ್ಲಿ ನೋಡಿದ ಹಲವು ಘಟನೆಗಳನ್ನು ಕ್ರೋಢೀಕರಿಸಿ ಆ‍ಕ್ಟರ್ ಚಿತ್ರವನ್ನು ನಿರ್ಮಿಸಿದ್ದೇನೆ. ಇದು ನಾಯಕನೋರ್ವನ ಜೀವನ ಚಿತ್ರಣವನ್ನು ತೋರಿಸುವಂತಹ ಅತ್ಯುತ್ತಮ ಚಿತ್ರವಾಗಿದೆ. ಈ ಚಿತ್ರವು ಭಾರತದ ಇತಿಹಾಸದಲ್ಲಿಯೇ ಮೈಲಿಗಲ್ಲಾಗಲಿದೆ. ಹಗ್ಗದ ಕೊನೆ ಎಂಬ ಚಿತ್ರದ ಮೂಲಕ ನಿನ್ನೆಯಷ್ಟೇ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ದಯಾಳ್ ಪದ್ಮನಾಭ ಅವರು ಈ ಚಿತ್ರದಲ್ಲೂ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಅದೇ ಚಿತ್ರದ ನಟ ನವೀನ್ ಕೃಷ್ಣ ಈ ಚಿತ್ರದಲ್ಲಿಯೂ ನಟನಾಗಿ ಅಭಿನಯಿಸಿದ್ದಾರೆ. ಗೌತಮ್ ಶ್ರೀವಾತ್ಸವ್ ಸಂಗೀತವಿದ್ದು, ಸುರೇಶ್ ಬೈರಸಂದ್ರ ಕ್ಯಾಮರಾ ಮ್ಯಾನ್ ಆಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.

Actor_Film_Press_2 Actor_Film_Press_3 Actor_Film_Press_4 Actor_Film_Press_5 Actor_Film_Press_6 Actor_Film_Press_7 Actor_Film_Press_8 Actor_Film_Press_9 Actor_Film_Press_10 Actor_Film_Press_11 Actor_Film_Press_12 Actor_Film_Press_13 Actor_Film_Press_14 Actor_Film_Press_15

ಎಲ್ಲಾ ಚಿತ್ರದಂತೆ ಇಲ್ಲಿ 4-5 ಹಾಡುಗಳಿಲ್ಲ. ಐಟಂ ಸಾಂಗ್ ಇಲ್ಲ, ಫೈಟಿಂಗ್ ಇಲ್ಲ, ಪಂಚಿಂಗ್ ಡೈಲಾಗ್ ಗಳಿಲ್ಲ ಆದರೂ ಜನ ಮೆಚ್ಚುವಂತಹ 3 ಹಾಡುಗಳನ್ನು ಹೊಂದಿದ 100 ನಿಮಿಷದ ಸಿನಿಮಾ ಇದಾಗಿದೆ ಎಂದು ವೀರೇಶ್ ತಿಳಿಸಿದರು.

ಈ ಚಿತ್ರದಲ್ಲಿ ಕೇವಲ ನಟನಾಗಿ ಮಾತ್ರವಲ್ಲ, ಸಾಹಿತ್ಯದಲ್ಲೂ, ಸಂಭಾಷಣಕಾರನಾಗಿ ಕೆಲಸ ಮಾಡಿದ್ದೇನೆ. ನನ್ನ ಜೀವನದಲ್ಲಿ ಸ್ಥಾನಗಳಿಸಿ ಕೊಟ್ಟದ್ದು ಹಗ್ಗದ ಕೊನೆ ಚಿತ್ರ. ಇದು ಅದನ್ನೂ ಮೀರಿಸುವಂತಹ ಚಿತ್ರವಾಗಿದೆ. ಈ ಚಿತ್ರವು ಕಲಾವಿದನ ಜೀವನವನ್ನು ತೋರಿಸುವಂತದಾಗಿದ್ದು. ನಟನೋರ್ವ ಸುಖ, ದುಃಖ, ಜಿಗುಪ್ಸೆ, ಒತ್ತಡವನ್ನು ಹೇಗೆ ಅನುಭವಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ವ್ಯಕ್ತಿ ಜೀವನದಲ್ಲಿ ಅನುಭವಿಸುವ ಕಷ್ಟವೆಲ್ಲವನ್ನೂ ಈ ಸಿನಿಮಾದಲ್ಲಿ ಚಿತ್ರಿಸಲಾಗಿದ್ದು, ಪ್ರೇಕ್ಷಕರು ಖಂಡಿತಾವಾಗಿಯೂ ಇದನ್ನು ಮೆಚ್ಚುತ್ತಾರೆ ಎಂದು ಚಿತ್ರದ ನಾಯಕ ನವೀನ್ ಕೃಷ್ಣ ತಿಳಿಸಿದರು.

Write A Comment