
ಕಳೆದ ಎರಡು ವರ್ಷಗಳಿಂದ ಜೋಡಿ ಹಕ್ಕಿಗಳಂತೆ ಎಲ್ಲೆಡೆ ಸುತ್ತುತ್ತಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡುವೆ ಬ್ರೇಕ್ ಅಪ್ ಆಗಿರೋದು ಹಳೇಯ ಸುದ್ದಿ.
ಆದರೆ ಕೊಹ್ಲಿ ಮತ್ತು ಅನುಷ್ಕಾ ನಡುವಿನ ಪ್ರೇಮ ಸಂಬಂಧ ಮುರಿದು ಬೀಳಲು ಕಾರಣರಾದವರು ಯಾರು ಎಂಬುದು ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಭಜರಂಗಿ ಬಾಯಿಜಾನ್ ಸಲ್ಮಾನ್ ಖಾನ್ ಅವರಂತೆ.
ಹೌದು ಬಾಲಿವುಡ್ ನ ಕೆಲ ಸಾಮಾಜಿಕ ಮಾಧ್ಯಮಗಳ ವರದಿ ಪ್ರಕಾರ ಕೊಹ್ಲಿ ಮತ್ತು ಅನುಷ್ಕಾ ಸಂಬಂಧದಲ್ಲಿ ನಡುವೆ ಬಿರುಕು ಮೂಡಲು ಸಲ್ಮಾನ್ ಕಾರಣವಂತೆ. ಸಲ್ಲು ಅಭಿನಯದ ಸುಲ್ತಾನ್ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾಳೆ.
ಸಲ್ಲು ಚಿತ್ರದಲ್ಲಿ ನಟಿಸುವ ಆಫರ್ ತಿರಸ್ಕರಿಸುವಂತೆ ಕೊಹ್ಲಿ ಅನುಷ್ಕಾಗೆ ಹೇಳಿದ್ದನಂತೆ. ಜೊತೆಗೆ ಸಿನಿಮಾಗಳಿಗೆ ಗುಡ್ ಬೈ ಹೇಳಿ ಹೌಸ್ ವೈಫ್ ಆಗಿರಲು ಸಿದ್ಧಗೊಳ್ಳುವಂತೆ ಕೊಹ್ಲಿ ಅನುಷ್ಕಾಗೆ ಸಲಹೆ ನೀಡಿದ್ದಾನೆ. ಆದರೆ ಅನುಷ್ಕಾ ಯಾವುದೇ ಕಾರಣಕ್ಕೂ ತನ್ನ ಸಿನಿಮಾ ಬದುಕು ಬಿಡಲು ಸಾಧ್ಯವಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಳಂತೆ. ಕೊಹ್ಲಿಯ ಈ ನಡೆಯನ್ನು ಅನುಷ್ಕಾ ಸಹಿಸಲು ಆಗದೇ ವೃತ್ತಿ ಜೀವನದ ಬಗ್ಗೆ ಅಪಾರ ನಿರೀಕ್ಷೆ ಹೊಂದಿರುವ ಅನುಷ್ಕಾ ಕೊಹ್ಲಿಯಿಂದ ದೂರವಾಗಲು ಯೋಚಿಸಿದ್ದಾಳಂತೆ. ಅಂತೆಯೇ ಕೊಹ್ಲಿ – ಅನುಷ್ಕಾ ನಡುವಿನ ಸಂಬಂಧ ಹಳಸಲು ಸಲ್ಮಾನ್ ಖಾನ್ ಪರೋಕ್ಷ ಕಾರಣವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.