
ಬೆಂಗಳೂರು: ಫೆಬ್ರುವರಿ 13ರಂದು ಉಪ ಚುನಾವಣೆ ನಡೆದಿದ್ದ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಸ್ಪಷ್ಟ ಫಲಿತಾಂಶ ದೊರೆಯಲಿದೆ.
ಹೆಬ್ಬಾಳ: ಎಲ್ಲಾ ಪಕ್ಷಗಳ ಪ್ರತಿಷ್ಠೆಗೆ ಕಾರಣವಾಗಿರುವ ಹೆಬ್ಬಾಳ ಕ್ಷೇತ್ರದಲ್ಲಿ ಮತ ಎಣಿಕೆ ಆರಂಭಗೊಂಡಿದ್ದು, ಯಾವುದೇ ಅಂಚೆ ಮತಗಳು ಬಂದಿಲ್ಲ ಎಂದು ವರದಿಯಾಗಿದೆ.
ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿರುವ ಹೆಬ್ಬಾಳದಲ್ಲಿ ಕಾಂಗ್ರೆಸ್ನಿಂದ ರೆಹಮಾನ್ ಷರೀಫ್, ಜೆಡಿಎಸ್ನಿಂದ ಇಸ್ಮಾಯಿಲ್ ಷರೀಫ್ ಹಾಗೂ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ ಅವರು ಕಣದಲ್ಲಿದ್ದಾರೆ.
ದೇವದುರ್ಗ: ಈ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆ ಪ್ರಗತಿಯಲ್ಲಿದೆ. ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ನಿಧನದಿಂದ ತೆರವಾಗಿರುವ ಸ್ಥಾನದಲ್ಲಿ ಕಾಂಗ್ರೆಸ್ಸಿನಿಂದ ಎ.ರಾಜಶೇಖರ್ ನಾಯಕ್, ಬಿಜೆಪಿಯಿಂದ ಎಂ.ಡಿ.ಅಯಾಜ್ ಖಾನ್ ಹಾಗೂ ಜೆಡಿಎಸ್ ಪಕ್ಷದಿಂದ ಕರಿಯಮ್ಮ ಅವರು ಕಣದಲ್ಲಿದ್ದಾರೆ.
ಬೀದರ: ಬೀದರ್ ಕ್ಷೇತ್ರದಲ್ಲೂ ಎತ ಎಣಿಕೆ ಕಾರ್ಯ ಚಾಲ್ತಿಯಲ್ಲಿದ್ದು, ಬಂದಿರುವ ಎಲ್ಲಾ 52 ಅಂಚೆಮತಗಳೂ ತಿರಸ್ಕೃತಗೊಂಡಿವೆ ಎನ್ನಲಾಗಿದೆ.
ಮತ್ತೊಂದೆಡೆ, ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಖಾನ್ ಅವರಿಗೆ ಆರಂಭಿಕ ಮುನ್ನಡೆ ಪಡೆದ್ದಾರೆ.