ಮಂಗಳೂರು,ಫೆ.09: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1,3 ಹಾಗೂ 5 ಸೆಮಿಷ್ಟರ್ ಗಳ ಪರೀಕ್ಷೆ ನಡೆದು ಸುಮಾರು 2 ತಿಂಗಳು ಕಳೆದರೂ ವಿವಿ ಫಲಿತಾಂಶ ಪ್ರಕಟನೆ ಮಾಡದೇ ಇರುವುದನ್ನು ಖಂಡಿಸಿ ಅಖಿಲಭಾರತ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಸಂಘಟನಾ ಕಾರ್ಯದರ್ಶಿ ತೇಜಸ್ವಿ, ತಕ್ಷಣ ಫಲಿತಾಂಶ ಪ್ರಕಟಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿವಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟಿಸಾಗುವುದು ಈ ಮೂಲಕ ಎಚ್ಚರಿಸಿದರು.



