ಮನೋರಂಜನೆ

ಜೆಟ್ ಏರ್ ವೇಸ್ ನಲ್ಲಿ ಸೋನು ನಿಗಮ್ ಗಾಯನ: ಐದು ಗಗನಸಖಿಯರ ಅಮಾನತು…ಈ ವೀಡಿಯೋ ನೋಡಿ ….

Pinterest LinkedIn Tumblr

ನವದೆಹಲಿ: ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್‌ ಆನ್‌ಬೋರ್ಡ್‌ ಗಾಯನ ಈಗ ಐದು ಮಂದಿ ಗಗನಸಖಿಯರ ಅಮಾತಿಗೆ ಕಾರಣವಾಗಿದೆ.

ಸೋನು ನಿಗಮ್‌ ಅವರು ಜೆಟ್‌ ಏರ್‌ವೇಸ್‌ ವಿಮಾನದ ಸೂಚನಾ ಧ್ವನಿ ವ್ಯವಸ್ಥೆ (ಅರ್ಡೆಸಿಂಗ್‌ ಸಿಸ್ಟಮ್‌) ಮೂಲಕ ಎರಡು ಹಾಡು ಹಾಡಿದ್ದು ಜೆಟ್‌ ಏರ್‌ವೇಸ್‌ನ ಐದು ಮಂದಿ ಗಗನಸಖಿಯರ ಕೆಲಸಕ್ಕೆ ಸಂಚಕಾರ ತಂದಿದೆ.

ನಡೆದಿದ್ದಿಷ್ಟು:
ಜನವರಿ 4ರಂದು ಜೋದಪುರದಿಂದ ಮುಂಬೈಗೆ ಸೋನು ನಿಗಮ್‌ ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದ ಸಹಪ್ರಯಾಣಿಕರು ಅವರು ಹಾಡುವಂತೆ ಒತ್ತಾಯಿಸಿದರು. ಅಭಿಮಾನದ ಕೋರಿಕೆಗೆ ಮಣಿದ ಸೋನು, ‘ವೀರ್‌ ಜರಾ’ ಚಿತ್ರದ ‘ದೋ ಪಲ್‌ ರುಖಾ’ ಮತ್ತು ‘ರೆಫ್ಯುಜಿ’ ಚಿತ್ರದ ‘ಪಂಚಿ ನದಿಯಾ’ ಗೀತೆಗಳನ್ನು ಹಾಡಿದರು.

ಸೋನು ಕುಳಿತಲ್ಲೇ ಈ ಗೀತೆಗಳನ್ನು ಗುನುಗಿದ್ದರೆ ಇಷ್ಟೆಲ್ಲಾ ರಾದ್ಧಾಂತಕ್ಕೆ ಅವಕಾಶವೇ ಇರುತ್ತಿರಲಿಲ್ಲ. ಆದರೆ, ಸೋನು ಹಾಡಿದ್ದು ಏರ್‌ಕ್ರ್ಯೂಗಳು ಪ್ರಯಾಣಿಕರಿಗೆ ಸೂಚನೆ ನೀಡಲು ಬಳಸುವ ಅರ್ಡೆಸಿಂಗ್‌ ಸಿಸ್ಟಮ್‌ನಿಂದ.

ಅರ್ಡೆಸಿಂಗ್‌ ಸಿಸ್ಟಮ್‌ ಮೂಲಕ ಹಾಡಲು ಅವಕಾಶ ಕೊಟ್ಟು, ಅರ್ಡೆಸಿಂಗ್‌ ಸಿಸ್ಟಮ್‌ ‘ದುರ್ಬಳಕೆ’ಗೆ ಕಾರಣರಾದ ಐದು ಮಂದಿ ಗಗನಸಖಿಯರನ್ನು ಈಗ ಅಮಾನತುಗೊಳಿಸಲಾಗಿದೆ.

ಸೋನು ಎದ್ದುಬಂದು ಅರ್ಡೆಸಿಂಗ್‌ ಸಿಸ್ಟಮ್‌ ಮೈಕ್‌ ಹಿಡಿದು ಹಾಡಿದ್ದು, ಹಾಡಿಗೆ ಮರುಳಾದ ಅಭಿಮಾನಿ ಪ್ರಯಾಣಿಕರು ಎದ್ದು ನಿಂತು ಸೋನು ದನಿಗೆ ದನಿಗೂಡಿಸಿದ್ದು, ಹೆಚ್ಚಿನ ಪ್ರಯಾಣಿಕರು ಆಸನದಿಂದ ಎದ್ದು ಹಾಡಿಗೆ ಹೆಜ್ಜೆ ಹಾಕಿದ್ದು – ಇವೆಲ್ಲವೂ ವಿಮಾನ ಪ್ರಯಾಣಕ್ಕೆ ಅಪಾಯ ತಂದೊಡ್ಡುವ ಅಂಶಗಳು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.

ಇದು ಏರ್‌ಕ್ರ್ಯೂಗಳ ಬೇಜವಾಬ್ದಾರಿತನ ಎಂದಿರುವ ಡಿಜಿಸಿಎ, ಹೆಚ್ಚಿನ ಪ್ರಯಾಣಿಕರು ಆಸನದಿಂದ ಎದ್ದು ಬಂದು ಒಂದೆಡೆ ಸೇರಿದ್ದರಿಂದ ವಿಮಾನದ ಗುರುತ್ವಾಕರ್ಷಣೆಯಲ್ಲಿ ವ್ಯತ್ಯಾಸವಾಗಿ ವಿಮಾನ ದುರಂತಕ್ಕೆ ಈಡಾಗುವ ಸಂಭವವಿತ್ತು ಎಂದು ಹೇಳಿದೆ.

ಅಂದಹಾಗೆ ಸೋನು ಆನ್‌ಬೋರ್ಡ್‌ ಗಾನ ಯೂಟ್ಯೂಬ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು.

Write A Comment