
ಮಂಗಳೂರು,ಫೆ.03 : ಕಾಲು ಕಳೆದುಕೊಂಡು ಶಾಶ್ವತವಾಗಿ ಅಂಗವೈಕಲ್ಯದಿಂದ ಬಳಲ ಬೇಕಾಗಿದ್ದ ಯುವತಿಯೊಬ್ಬರ ಬಾಳಿಗೆ ಮರುಹುಟ್ಟು ನೀಡುವಲ್ಲಿ ನಗರದ ಇಂಡಿಯಾನಾ ಅಸ್ಪತ್ರೆ ಮತ್ತು ಹೃದಯ ಸಂಸ್ಥೆಯ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ಇಂಡಿಯಾನಾ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಜಲಾಲುದ್ದೀನ್ ಆಕ್ವರ್ ಅವರು ತಿಳಿಸಿದ್ದಾರೆ.
ಅಸ್ಪತ್ರೆಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೇರಳ ಕಣ್ಣೂರಿನ ನಿವಾಸಿ 20 ವಯಸ್ಸಿನ ಯುವತಿಯ ಎಡಗಾಲಲ್ಲಿ ಕ್ಯಾನ್ಸರ್ ಕಾರಕ ಗಡ್ಡೆ ಬೆಳೆದಿತ್ತು. ಮೊದಲು ಬೇರೆಡೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಆಕೆಗೆ ಮತ್ತೆ ಈ ಗಡ್ಡೆ ಕಾಣಿಸಿಕೊಂಡಿತ್ತು. ಎರಡನೇ ಬಾರಿ ಇದು ಕಾಣಿಸಿಕೊಂಡಿದ್ದರಿಂದ ಆಕೆಯ ಜೀವವನ್ನು ಉಳಿಸುವ ಸಲುವಾಗಿ ಆಕೆಯ ಎಡಗಾಲನ್ನು ಕತ್ತರಿಸುವುದೊಂದೇ ಮಾರ್ಗ ಎಂದು ವೈದ್ಯರು ಸಲಹೆ ಮಾಡಿದರು. ಹಲವು ಉನ್ನತ ದರ್ಜೆಯ ಆಸ್ಪತ್ರೆಗಳಲ್ಲಿ ಸಲಹೆ ಪಡೆದಾಗ ಕೂಡಾ ಇದೇ ಉತ್ತರ ದೊರಕಿತು.


ಕೊನೆಗೆ ಇಂಡಿಯಾನ್ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯನ್ನು ಸಂಪರ್ಕಿಸಿದಾಗ , ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಜಲಾಲುದ್ದೀನ್ ಆಕ್ವರ್ ನೇತೃತ್ವದ ತಂಡ ಈ ಪ್ರರಕರಣವನ್ನು ಸವಲಾಗಿ ಸ್ವೀಕರಿಸಿ ಸಂಕೀರ್ಣ ಶಸ್ತ್ರ ಚಿಕಿತ್ಸೆಗೆ ಮುಂದಾಯಿತು.
ಕೀಲು ರೋಗ ತಜ್ಞರಾದ ಡಾ ಇಮಿಯಾಜ್ ಹಾಗೂ ಡಾ.ಅಭಿಷೇಕ್, ಆರಿವಳಿಕೆ ತಜ್ಞ ಡಾ.ವಿನ್ಸೆಂಟ್ ಅವರನ್ನೊಳಗೊಂಡ ತಂಡ ಇದರಲ್ಲಿ ಯಶಸ್ವಿಯಾಯಿತು. ಕೃತಕ ಅಂಗಜೋಡಣೆ ಮೂಲಕ ಕಾಲನ್ನು ಉಳಿಸುವಲ್ಲಿ ಯಶಸ್ವಿಯಾಯಿತು. ಇಂಥ ಪ್ರಕರಣ ಯಶಸ್ವಿಯಾಗಿರುವುದು ಭಾರತದಲ್ಲೇ ಇದು ಮೊದಲು ಎಂದವರು ಹೇಳಿದರು.
ಇದೀಗ ಯುವತಿ ಕನಿಷ್ಠ ಅಂಗವೈಕಲ್ಯದೊಂದಿಗೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಹೊಸ ಜೀವನವನ್ನು ನೀಡಿದ್ದಕ್ಕಾಗಿ ಯುವತಿ ಹಾಗೂ ಯುವತಿಯ ಪೋಷಕರು ಡಾ.ಜಲಾಲುದ್ದೀನ್ ಹಾಗೂ ಅವರ ತಂಡಕ್ಕೆ ಕೃತಜ್ಜತೆ ಸಲ್ಲಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಇಮ್ತಿಯಾಜ್, ಡಾ. ದೇವಾನಂದ ಶೆಟ್ಟಿ, ಡಾ.ಅಭಿಷೇಕ್, ಅಸ್ಪತ್ರೆಯ ಪಿ.ಆರ್.ಓ ಬಾಸ್ಕರ್ ಅರಸ್, ಚಿಕಿತ್ಸೆ ಪಡೆದ ಯುವತಿ ಹಾಗೂ ಅಕೆಯ ಸಂಬಂಧಿಕರು ಉಪಸ್ಥಿತರಿದ್ದರು.