ಕನ್ನಡ ವಾರ್ತೆಗಳು

ಫೆ.4: ಸ್ಪಿರಿಟ್‌ಆಫ್ ಇಂಡಿಯಾ ರನ್ನರ್ ಪ್ಯಾಟ್ರಿಕ್ ಫಾರ್ಮರ್ ಮಂಗಳೂರಿಗೆ…

Pinterest LinkedIn Tumblr

sprite_patrick_farmar_1

ಮ೦ಗಳೂರು ಫೆ.03: ಆಸ್ಟ್ರೇಲಿಯಾದ ಅಲ್ಟ್ರಾ ಮ್ಯಾರಥಾನ್ ಓಟಗಾರ ಮತ್ತು ಸಂಸತ್ತಿನ ಸದಸ್ಯರಾಗಿದ್ದ ಪ್ಯಾಟ್ರಿಕ್ ಫಾರ್ಮರ್ ಅವರು ಭಾರತ ಮತ್ತು ಆಸ್ಟ್ರೇಲಿಯಾದ ಬಾಂಧವ್ಯವನ್ನು ವೃದ್ಧಿಸಲು ಮತ್ತು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಸಂಗ್ರಹಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಟ್ಟು 4,600 ಕಿ.ಮೀಗಳನ್ನು ಕ್ರಮಿಸುವ ಇಚ್ಚೆಯಿಂದ ಫೆ.4 ರಂದು ಮಂಗಳೂರಿಗೆ ಪ್ರವೇಶಸಲಿದ್ದಾರೆ.

ಪ್ಯಾಟ್ರಿಕ್ ಫಾರ್ಮರ್ ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಪಡುಬಿದ್ರಿಯವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಟವನ್ನು ಫೆಬ್ರವರಿ  4ರಂದು ಕೈಗೊಂಡು ಅಂದು ಬೆಳಿಗ್ಗೆ 10ಗಂಟೆಗೆ ತಲಪಾಡಿಯಲ್ಲಿ ಅವರನ್ನು ಸ್ವಾಗತಿಸಲಾಗುವುದು. 11.20ಕ್ಕೆ ಜೆಪ್ಪಿನಮೊಗರು ಯೆನಪೋಯಾ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, 1.30ಗಂಟೆಗೆ ಸರ್ಕ್ಯುಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಬಳಿಕ ಪಡುಬಿದ್ರೆಗೆ ತೆರಳಿ, ಅಂದು ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.

sprite_patrick_farmar_2

ಈ ಓಟದಲ್ಲಿ ಗಣ್ಯರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಯವರು ಮತ್ತು ವೃತ್ತಿಪರ ಓಟಗಾರರು ಪಾಲ್ಗೊಂಡು ಈ ಓಟವನ್ನು ಯಶಸ್ವಿಗೊಳಿಸಬೇಕೆಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಸ್ಪಿರಿಟ್‌ಆಫ್ ಇಂಡಿಯಾ ರನ್ :ಎಲ್ಲಾ ವಿವರ ಇಲ್ಲಿದೆ :

sprite_patrick_farmar_3

Write A Comment