ಕರ್ನಾಟಕ

ಪುತ್ರನ ನೆನೆದು ಭಾವುಕರಾದ ಹುತಾತ್ಮ ಲೆ.ಕ.ನಿರಂಜನ್ ತಂದೆ!

Pinterest LinkedIn Tumblr

20160126_1117221

ಬೆಂಗಳೂರು: ಕಳೆದ ವರ್ಷ ರಾಜ್ ಪಥ್ ನಲ್ಲಿ ಪುತ್ರ ಗಣತಂತ್ರ ಪರೇಡ್ ನಲ್ಲಿ ಹೆಜ್ಜೆ ಹಾಕಿದ್ದನ್ನು ಕಂಡು ಸಂತಸದಲ್ಲಿ ತೇಲುತ್ತಿದ್ದೇ. ಈ ಬಾರಿ ಅದೇ ಪುತ್ರನ ವೀರಮರಣಕ್ಕೆ ಮಿಡಿದು ಗೌರವ ವಂದನೆ ಸಲ್ಲಿಸಬೇಕಾಗಿ ಬಂದಿದೆ.

ಕಣ್ಣಾಲಿಗಳಲ್ಲಿ ತುಂಬಿದ್ದ ಹನಿಗಳನ್ನು ಹತ್ತಿಕ್ಕುತ್ತ ಭಾವುಕರಾದವರು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲೆ ನುಸುಳುಕೋರ ಭಯೋತ್ಪಾದಕರು ನಡೆಸಿದ ದಾಳಿ ವೇಳೆ ಹತರಾದ ಬೆಂಗಳೂರಿನ ಲೆ.ಕ.ನಿರಂಜನ್ ತಂದೆ ಶಿವರಾಜ್. ನ್ಯೂ ಹಾರಿಜಾನ್ ಕಾಲೇಜಿನ ಸಮಾರಂಭದಲ್ಲಿ ಕಳೆದ ವರ್ಷದ ಗಣರಾಜ್ಯೋತ್ಸವದಲ್ಲಿ ಪುತ್ರ ನಿರಂಜನ್ ಪಥ ಸಂಚಲನ ನಡೆಸಿದ್ದನ್ನು ರಾಜ್ ಪಥ್ ನಲ್ಲಿ ಕಂಡ ನೆನಪು ಮೆಲುಕು ಹಾಕಿದರು.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕಳೆದ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ನಿರಂಜನ್ ಸ್ವತಃ ನಮ್ಮನ್ನು ದೆಹಲಿಗೆ ಕರೆಸಿಕೊಂಡು ಗಣತಂತ್ರ ಪರೇಡ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದ. ಅವನೇ ನಮ್ಮನ್ನು ಮುಂಜಾವಿನ ಕೊರೆಯುವ ಚಳೆಯಲ್ಲಿ ರಾಜ್ ಪಥ್ ಗೆ ಕರೆದೊಯ್ದಿದ್ದ. ರಾಜ್ ಪಥ್ ನಲ್ಲಿ ಮಗನ ಪಥ ಸಂಚಲನವನ್ನು ನೋಡುವುದು ನಮ್ಮ ಕನಸಾಗಿತ್ತು ಎಂದು ಶಿವರಾಜ್ ಕಣ್ಣೀರಾದರು.

Write A Comment