ಬೆಂಗಳೂರು, ಜ.23- ಮುಂಬರುವ ಫೆಬ್ರವರಿ 17ರಂದು ಆರಂಭವಾಗಬೇಕಾಗಿದ್ದ `ಪ್ರಥಮ’ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹಾಗೂ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ರಮೇಶ್ ತಿಳಿಸಿದ್ದಾರೆ.
ಫೆ 17 ರಿಂದ 29 ನಡೆಯಬೇಕಿದ್ದ ಪರೀಕ್ಷೆಯನ್ನು ಫೆ 24 ರಿಂದ ಮಾರ್ಚ್ 05 ವರೆಗೆ ನಡೆಯಲಿದೆ. ಫೆ. 24ರಂದು ಹಿಂದಿ, 25ರಂದು ಕನ್ನಡ, ತಮಿಳು, ತೆಲುಗು, ಮಾಳಯಾಳಂ, ಮರಾಠಿ, ಅರೇಬಿಕ್, ಫ್ರೇಂಚ್, 26ರಂದು ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ, 27ರಂದು ಇಂಗ್ಲೀಷ್, 29ರಂದು ಭೂಗೋಳ ಶಾಸ್ತ್ರ,ಗಣಿತ, ಬೇಸಿಕ್ ಮ್ಯಾಥ್ಸ, ಹಾಗೂ ಮಾರ್ಚ್ 1ರಂದು ಬಿಸಿನೆಸ್ ಸ್ಟಡೀಸ್, ರಸಯಾನ ಶಾಸ್ತ್ರ, ಶಿಕ್ಷಣ, ಮಾರ್ಚ್ 2ರಂದು ಇತಿಹಾಸ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ, 3ರಂದು ರಾಜ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ, 4ರಂದು ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಭೌತಶಾಸ್ತ್ರ, 5ರಂದು ಸಮಾಜ ಶಾಸ್ತ್ರ, ಜೀವ ಶಾಸ್ತ್ರ ಪರೀಕ್ಷೆಗಳು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.