ಬೆಂಗಳೂರು, ಜ.20-ಮೊಟ್ಟೆ ಪೌಷ್ಠಿಕ ಆಹಾರವಾಗಿದ್ದು, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವಂತೆ ಮಕ್ಕಳ ಆಯೋಗದ ರಾಜ್ಯಾಧ್ಯಕ್ಷೆ ಕೃಪಾ ಆಳ್ವ ಸಲಹೆ ಮಾಡಿದರು.
ಸಾಮಾಜಿಕ ಪರಿವರ್ತನಾ ಜನಾಂದೋಲನ ಹಾಗೂ ಸಮ ಸಮಾಜ ವೇದಿಕೆ ಶಾಸಕರ ಭವನದಲ್ಲಿ ಆಯೋಜಿಸಿದ್ದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದರ ಕುರಿತ ಚಿಂತನಾ ಸಭೆ ಉದ್ಘಾಟನೆಯಲ್ಲಿ ಮಾತನಾಡಿದರು.
ಮಕ್ಕಳಿಗೆ ಮೊಟ್ಟೆ ಕೊಡುವುದರಿಂದ ಭವಿಷ್ಯದ ಪ್ರಜೆಗಳನ್ನು ಸದೃಢಗೊಳಿಸಿದಂತೆ ಆಗುತ್ತದೆ ಎಂದು ಅವರು ಹೇಳಿದರು. ನಾನೂ ಕೂಡ ಮೊಟ್ಟೆ ತಿಂದು ಬೆಳೆದವಳು. ಮೊಟ್ಟೆಯಲ್ಲಿ ಹೆಚ್ಚಿನ ಪೌಷ್ಟಿಕಾಂಶವಿರುತ್ತದೆ ಎಂದು ತಿಳಿಸಿದರು.
ಶಾಲೆಗೆ ಬರುವ ಮಕ್ಕಳ ಟಿಫನ್ ಬಾಕ್ಸನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವೇ ಸುತ್ತೋಲೆ ನೀಡಿದೆ. ಇಂದಿನ ದುಡಿವ ತಾಯಂದಿರು ಫಾಸ್ಟ್ ಫುಡ್ ಮೊರೆ ಹೋಗುತ್ತಿರುವುದರಿಂದ ಪೌಷ್ಟಿಕ ಆಹಾರ ನೀಡುವುದು ಅಗತ್ಯ ಎಂದರು. ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡಿ : ಕೃಪಾ ಆಳ್ವ
ಬೆಂಗಳೂರು, ಜ.20-ಮೊಟ್ಟೆ ಪೌಷ್ಠಿಕ ಆಹಾರವಾಗಿದ್ದು, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವಂತೆ ಮಕ್ಕಳ ಆಯೋಗದ ರಾಜ್ಯಾಧ್ಯಕ್ಷೆ ಕೃಪಾ ಆಳ್ವ ಸಲಹೆ ಮಾಡಿದರು.
ಸಾಮಾಜಿಕ ಪರಿವರ್ತನಾ ಜನಾಂದೋಲನ ಹಾಗೂ ಸಮ ಸಮಾಜ ವೇದಿಕೆ ಶಾಸಕರ ಭವನದಲ್ಲಿ ಆಯೋಜಿಸಿದ್ದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದರ ಕುರಿತ ಚಿಂತನಾ ಸಭೆ ಉದ್ಘಾಟನೆಯಲ್ಲಿ ಮಾತನಾಡಿದರು.
ಮಕ್ಕಳಿಗೆ ಮೊಟ್ಟೆ ಕೊಡುವುದರಿಂದ ಭವಿಷ್ಯದ ಪ್ರಜೆಗಳನ್ನು ಸದೃಢಗೊಳಿಸಿದಂತೆ ಆಗುತ್ತದೆ ಎಂದು ಅವರು ಹೇಳಿದರು. ನಾನೂ ಕೂಡ ಮೊಟ್ಟೆ ತಿಂದು ಬೆಳೆದವಳು. ಮೊಟ್ಟೆಯಲ್ಲಿ ಹೆಚ್ಚಿನ ಪೌಷ್ಟಿಕಾಂಶವಿರುತ್ತದೆ ಎಂದು ತಿಳಿಸಿದರು.
ಶಾಲೆಗೆ ಬರುವ ಮಕ್ಕಳ ಟಿಫನ್ ಬಾಕ್ಸನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವೇ ಸುತ್ತೋಲೆ ನೀಡಿದೆ. ಇಂದಿನ ದುಡಿವ ತಾಯಂದಿರು ಫಾಸ್ಟ್ ಫುಡ್ ಮೊರೆ ಹೋಗುತ್ತಿರುವುದರಿಂದ ಪೌಷ್ಟಿಕ ಆಹಾರ ನೀಡುವುದು ಅಗತ್ಯ ಎಂದರು.