ಕ್ರೇಜಿಸ್ಟಾರ್ ರವಿಚಂದ್ರನ್ ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಹೋಗ್ತಾರೆ ಅನ್ನೋ ಸುದ್ದಿ ಸಾಕಷ್ಟು ದಿನಗಳಿಂದ ಓಡಾಡುತ್ತಲೇ ಇತ್ತು. ವೀಕ್ಷಕರೂ ಪ್ರತೀ ದಿನ ರವಿ ಮಾಮ ಈಗ ಬರ್ತಾರೆ, ಆಗ ಬರ್ತಾರೆ ಅಂತ ಕಾಯ್ತಾನೇ ಇದ್ರು. ಆದ್ರೆ ರವಿಮಾಮಂದು ಮಾತ್ರ ಸುದ್ದಿಯೇ ಇಲ್ಲ.
ಇನ್ನೇನು ಮೂರು ವಾರ ಮುಗಿದ್ರೆ ಬಿಗ್‌ಬಾಸ್ ಸೀಸನ್ನೇ ಮುಗಿದುಹೋಗುತ್ತೆ. ಇನ್ನೂ ರವಿಚಂದ್ರನ್ ಬರದೇ ಇರೋದು ನೋಡಿ ಅಭಿಮಾನಿಗಳು ನಿರಾಶರಾಗಿದ್ದಾರೆ. ಉಳಿದಿರೋ ಮೂರು ವಾರಗಳಲ್ಲಿ ಮನೆಯ ಸದಸ್ಯರ ಡ್ರಾಮಾಗಳೇ ಸಾಕಷ್ಟಿವೆ.
ಹಾಗಾಗಿ ಕೊನೆಯ ವಾರ ಫಿನಾಲೆಯಲ್ಲಿ ಸ್ಪೆಷಲ್ ಗೆಸ್ಟ್ ಆಗಿ ರವಿಚಂದ್ರನ್ ಬರಬಹುದಾ ಅನ್ನೋ ದೂರದ ಆಸೆ ಅಭಿಮಾನಿಗಳದ್ದು.
ಸದ್ಯಕ್ಕಂತೂ ಈ ಕುರಿತು ಏನೂ ಖಂಡಿತವಾದ ಸುದ್ದಿ ಇಲ್ಲ. ಆದ್ರೆ ರವಿಚಂದ್ರನ್‌ರನ್ನು ಬಿಗ್‌ಬಾಸ್ ವೇದಿಕೆಯಲ್ಲಿ ನೋಡೋ ಅಭಿಮಾನಿಗಳ ಆಸೆ ಮಾತ್ರ ಹಾಗೇ ಇದೆ.