ಶ್ರೀನಗರ : ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪೊಲೀಸ್ ಕೇಂದ್ರ ಕಚೇರಿಯ ಹೊರಭಾಗದಲ್ಲಿ ಗುರುವಾರ ಪತ್ತೆಯಾದ ಬಳಿಕ ಉದ್ವಿಗ್ನಗೊಂಡು ರೊಚ್ಚಿಗೆದ್ದ ಸ್ಥಳಿಯರು ಪೊಲೀಸ್ ಕೇಂದ್ರದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಘಟಿಸಿದೆ.
ಗಂಟಲು ಸೀಳಲ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಹಳಿ ಮೇಲೆ ಸತ್ತು ಬಿದ್ದಿದ್ದ ವ್ಯಕ್ತಿಯನ್ನು ಶ್ರೀನಗರದ ಪೀರ್ಬಾಗ್ ನಿವಾಸಿ ಓವಾಯಿಸ್ ಬಶೀರ್ ಮಲಿಕ್ ಎಂಬುದಾಗಿ ಗುರುತಿಸಲಾಗಿದೆ. ಈಗ 2016ರ ಜನವರಿ 12ರಿಂದ ಕಣ್ಮರೆಯಾಗಿದ್ದ ಎಂದು ಮೂಲಗಳು ಹೇಳಿವೆ.