ಉಡುಪಿ: ಸಿಹಿನೀರಿನ ಮರಳುಗಾರಿಕೆ ಹಾಗೂ ಸಾಗಣಿಕೆಯು ಅಕ್ರಮವಾಗಿ ನಡೆಯುತ್ತಿದ್ದ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಕಂಡ್ಲೂರು ಎಂಬಲ್ಲಿ ಈ ದಾಳಿ ನಡೆದಿದ್ದು ಎರಡು ಮರಳು ತುಂಬಿದ ಲಾರಿಗಳನ್ನು ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ಕಂಡ್ಲೂರಿನ ನದಿ ಪ್ರದೇಶದಲ್ಲಿ ನೌಷದ್ ಎನ್ನುವವರು ಸೇರಿದಂತೆ ಇತರರು ನಡೆಸುತ್ತಿದ್ದ ಅಕ್ರಮ ಮರಳುಗಾರಿಕೆ ಇದಾಗಿದೆ ಎನ್ನಲಾಗಿದ್ದು, ಮಂಗಳವಾರ ಬೆಳಿಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮರಳು ತುಂಬಿದ್ದ ಎರಡು ಲಾರಿಗಳು ಇಲಾಖೆಯವರಿಗೆ ಸಿಕ್ಕಿದೆ. ಸದ್ಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಅಕ್ರಮ ಕಂಡ್ಲೂರಿನಲ್ಲಿ ಮಾತ್ರವೇ?
ಅಕ್ರಮ ಮರಳುಗಾರಿಕೆ ಜಿಲ್ಲಾದ್ಯಂತ ನಡೆಯುತ್ತಿದ್ದು ಕೇವಲ ಕಂಡ್ಲೂರನ್ನೇ ಕೇಂದ್ರವಾಗಿಸಿಕೊಂಡು ಅಧಿಕಾರಿಗಳು ದಾಳಿ ನಡೆಸುತ್ತಿದ್ದು, ಎಲ್ಲೆಡೆ ದಾಳಿ ನಡೆಸಿ ಅಕ್ರಮವನ್ನು ತಡೆಯಲಿ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೇ ಜಿಲ್ಲೆಯ ಎಲ್ಲೇಡೆ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ಮಾಡುತ್ತಿದ್ದು, ಈ ದಾಳಿಯು ನಿರಂತರ ನಡೆಯಲಿದೆ ಎನ್ನುತ್ತಾರೆ.