ಕರ್ನಾಟಕ

ಯಶ್ ಸಿನೆಮಾದಿಂದ ಆದಿತ್ಯ ಔಟ್…ಕಾರಣ….!

Pinterest LinkedIn Tumblr

1

ಬೆಂಗಳೂರು: ಮಹೇಶ್ ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಯಶ್ ನಟನೆಯ ಸಿನೆಮಾಗೆ ಹಲವಾರು ಬದಲಾವಣೆಗಳಾಗುತ್ತಿವೆ. ಈ ಸಿನೆಮಾದಲ್ಲಿ ಯಶ್ ಎದುರು ಪ್ರಮುಖ ಪಾತ್ರವೊಂದರಲ್ಲಿ ನಟಿಸಬೇಕಿದ್ದ ಆದಿತ್ಯ ಕೊನೆ ಘಳಿಗೆಯಲ್ಲಿ ಯೋಜನೆಯಿಂದ ಹೊರಬಂದಿದ್ದಾರೆ. “ಬದಲಾಯಿಸಲು ಸಾಧ್ಯವಾಗದ ಕಾರಣಗಳಿಂದ ಯಶ್ ಸಿನೆಮಾದಿಂದ ಹೊರಬರಬೇಕಾಯಿತು… ತಂಡಕ್ಕೆ ಶುಭಾಶಯಗಳು!” ಎಂದು ಆದಿತ್ಯ ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ಮಹೇಶ್ ಹೇಳುವ ಪ್ರಕಾರ ನಟನಿಗೆ ಒಂದು ವಿಧವಾದ ಲುಕ್ ಬೆಳೆಸಿಕೊಳ್ಳಲು ಆದಿತ್ಯ ಅವರಿಗೆ ತಿಳಿಸಿದ್ದರಂತೆ. “ಅವರ ಮುಂದಿನ ಸಿನೆಮಾ ‘ನಾನೇ ನೆಕ್ಸ್ಟ್ ಸಿ ಎಂ’ ಮುಂದೂಡಲಾಗಿದೆ. ಅವರು ನಾನು ಹೇಳಿದ ಮುಖಛಾಯೆ ಹೊಂದಿದ್ದರೆ ಅವರ ಮುಂದಿನ ಸಿನೆಮಾಗೆ ಕಷ್ಟವಾಗುತ್ತದೆ. ನಾವು ಕೃತಕ ಗಡ್ಡ ಮೀಸೆಯೊಂದಿಗೆ ಮುಂದುವರೆಯಲು ಸಾಧ್ಯವಿಲ್ಲ ಆದುದರಿಂದ ಈ ಧೃಢ ನಿರ್ಧಾರಕ್ಕೆ ಬರಬೇಕಾಯಿತು” ಎನ್ನುತ್ತಾರೆ.

ಆದುದರಿಂದ ಈ ಸಿನೆಮಾದ ನಿರ್ಮಾಪಕರು ಈಗ ಆದಿತ್ಯ ಜಾಗಕ್ಕೆ ಹೊಸ ಮುಖದ ಹುಡುಕಾಟದಲ್ಲಿದ್ದಾರೆ. ಅಲ್ಲದೆ ಸಿನೆಮ್ಯಾಟೋಗ್ರಾಫರ್ ಸುಧಾಕರ್ ರಾಜ್ ಅವರನ್ನು ಆಂಡ್ರ್ಯೂ ಬಾಬು ಬದಲಾಯಿಸಿದ್ದಾರೆ. “ಸುಧಾಕರ್ ಅವರು ನಂದಕಿಶೋರ್ ನಿರ್ದೇಶನದ ‘ಟೈಗರ್’ ಮುಗಿಸಬೇಕಿದೆ. ಮತ್ತು ಅವರು ಮುಂದಿನ ಸಿನೆಮಾ ಕೈಗೆತ್ತಿಕೊಳ್ಳುವ ಮೊದಲು ಸದ್ಯದ ಸಿನೆಮಾ ಮುಗಿಸುವಂತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರೂ ಕೂಡ ನನ್ನ ಗೆಳೆಯರಾಗಿರುವುದರಿಂದ ನನಗೆ ಕಷ್ಟ ಅರ್ಥವಾಗುತ್ತದೆ” ಎನ್ನುತ್ತಾರೆ ಮಹೇಶ್.

ಯಶ್ ಅವರ ಜನ್ಮ ದಿನವಾದ ಮಾರ್ಚ್ ೮ ರಂದು ಸಿನೆಮಾದ ಶೀರ್ಷಿಕೆ ಬಿಡುಗಡೆ ಮಾಡುವುದಾಗಿ ಮಹೇಶ್ ತಿಳಿಸಿದ್ದಾರೆ.

Write A Comment